ಮೊನ್ನೆ ಸಿದ್ದು, ಇಂದು ಡಿ.ಕೆ.ಶಿ ಕೈ ಹಿಡಿದು ಓಡಿದ ರಾಹುಲ್ ಗಾಂಧಿ

ತುಮಕೂರು: ಭಾರತ್ ಜೋಡೋ ಯಾತ್ರೆ ಇಂದು ತುಮಕೂರು ಗಡಿಯನ್ನು ಬಿಟ್ಟು ಚಿತ್ರದುರ್ಗವನ್ನು ಪ್ರವೇಶ ಮಾಡಿದೆ. ಈ ವೇಳೆಯಲ್ಲಿ ರಾಹುಲ್ ಗಾಂಧಿಗೆ ಡಿ. ಕೆ ಶಿವಕುಮಾರ್ ಅವರು ಸಾಥ್ ನೀಡಿದರು.ಮೊನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜೊತೆಗೆ ಪಾದಾಯಾತ್ರೆಯಲ್ಲಿ ರನ್ನಿಂಗ್ ರೇಸ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು, ಇಂದು ಕೂಡ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಡಿಕೆ ಶಿವ ಕುಮಾರ್ ಅವರು ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಕೈಗಿಟ್ಟ ರಾಹುಲ್, ಸುಮಾರು 100 ಮೀಟರ್‌ನಷ್ಟು ಓಡಿ ಎಲ್ಲರ ಗಮನ ಸೆಳೆದರು.