ಸಿದ್ದರಾಮಯ್ಯ ಒಬ್ಬ ಅತಂತ್ರ ರಾಜಕಾರಣಿ – ಸಚಿವ ಹಾಲಪ್ಪ ಆಚಾರ್ ಲೇವಡಿ

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸೋಲಿನ ಭಯದಿಂದ ಕ್ಷೇತ್ರ ಹುಡುಕಾಟದಲ್ಲಿ ತೊಡಗುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಬ್ಬ ಅತಂತ್ರ ರಾಜಕಾರಣಿಯಾಗಿದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನವರ ಚುನಾವಣಾ ಕ್ಷೇತ್ರ ವಿಚಾರವಾಗಿ ಧಾರವಾಡದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರಿಗೆ ಕ್ಷೇತ್ರದ ನೆಲೆಯೇ ಇಲ್ಲ. ಬಹುತೇಕ ಕಾಂಗ್ರೆಸ್ ಪಕ್ಷದ ನಾಯಕರ ಪರಿಸ್ಥಿತಿಯೂ ಇದೇ ರೀತಿಯಾಗಿದೆ ಎಂದರು.
ಕೆಲವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರುವ ಕುರಿತ ಪ್ರಶ್ನೆಗೆ ಇದೇ ಸಂದರ್ಭದಲ್ಲಿ ಉತ್ತರಿಸಿದ ಸಚಿವರು, ಅದು ಕೇವಲ ಕಾಂಗ್ರೆಸ್ ನ ಕಲ್ಪನೆ ಮಾತ್ರ. ಯಾರೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲಾ ಎಂದು ಹೇಳಿದರು.
ಇನ್ನು, ಸಹಕಾರ ಖಾತೆ ಸಚಿವ ಎಸ್.ಟಿ.ಸೋಮಶೇಖರ್ ಅವರ ಮನೆಯಲ್ಲಿ ಒಬ್ಬರು ನಿಧನರಾಗಿರುವ ಹಿನ್ನೆಲೆ ಸಚಿವರು ನಿನ್ನೆ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಇಂದು ಧಾರವಾಡದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೂ ಆಗಮಿಸಿಲ್ಲ ಎಂದು ಹಾಲಪ್ಪ ಆಚಾರ್ ಸ್ಪಷ್ಟಪಡಿಸಿದರು.