ವಿಜಯನಗರದಲ್ಲಿ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವ; 85 ಅಡಿ ಎತ್ತರದ ರಥ ಎಳೆದು ಪುನೀತಾರದ ಭಕ್ತರು

ವಿಜಯನಗರದಲ್ಲಿ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವ; 85 ಅಡಿ ಎತ್ತರದ ರಥ ಎಳೆದು ಪುನೀತಾರದ ಭಕ್ತರು

ವಿಜಯನಗರ: ಜಿಲ್ಲೆಯಲ್ಲಿ ಐತಿಹಾಕಸಿಕ ಪ್ರಸಿದ್ಧ ಶ್ರೀಗುರು ಕೊಟ್ಟೂರೇಶ್ವರನ ರಥೋತ್ಸವ ಅದ್ಧೂರಿಗೆ ನಡೆಯಿತು. ಈ ರಥೋತ್ಸವಕ್ಕೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಕೊಟ್ಟೂರೇಶ್ವರನ ದರ್ಶನ ಪಡೆದು ಪುನೀತಾರದರು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗುರುಬಸವೇಶ್ವರರ ರಥೋತ್ಸವ ನಡೆದಿದೆ.

ಆದರೆ ಕಳೆದ ಬಾರಿ ಕೊರೊನಾದಿಂದ ಸರಳವಾಗಿ ಆಚರಣೆ ಮಾಡಲಾಗಿತ್ತು. ಆದರೆ ಈಬಾರಿ ಕೊರೊನಾ ಕಡಿಮೆಯಾಗಿದ್ದರಿಂದ ಗುರುಬಸವೇಶ್ವರರ ರಥೋತ್ಸವ ಅದ್ಧೂರಿಯಾಗಿ ಜರುಗಿದೆ. ಇನ್ನು ಹರಿಜನ ಸಮುದಾಯದ ಮುತ್ತೈದೆಯರು ಶ್ರೀಸ್ವಾಮಿಗೆ ಕಳಸದಾರತಿ ಬೆಳಗುತ್ತಿದ್ದಂತೆ ರಥೋತ್ಸವ ಆರಂಭವಾಯ್ತು. ಲಕ್ಷಾಂತರ ಭಕ್ತರು 85 ಅಡಿ ಎತ್ತರ ರಥವನ್ನ ಎಳೆದು ಪುನೀತರಾದ್ರು.

ಇನ್ನು ಈ ಜಾತ್ರೆಯಲ್ಲಿ ಹರಕೆ ಹೊತ್ತರೇ ತಾವು ಬೇಡಿಕೊಂಡ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಇದರಿಂದಾಗಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಜಾತ್ರೆಗೆ ಆಗಮಿಸಿ, ಕೊಟ್ಟೂರೇಶ್ವರನ ದರ್ಶನ ಪಡೆದು ಹರಕೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.