ಬಿಜೆಪಿ ಸೇರ್ಪಡೆ ಗುಟ್ಟು ಬಿಚ್ಚಿಟ್ಟ ಸಂಸದೆ ಸುಮಲತಾ
ಮಂಡ್ಯ : ಬಿಜೆಪಿ ಸೇರ್ಪಡೆ ಕುರಿತು ಸಂಸದೆ ಸುಮಲತಾ ಜೊತೆ ಪಕ್ಷದ ವರಿಷ್ಠರು ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಸ್ಪೋಟಕ ಹೇಳಿಕೆ ನೀಡಿದ್ದರು. ಇದೀಗ ಈ ಕುರಿತು ಸಂಸದೆ ಸುಮಲತಾ ಅವರೇ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಸಹ ಈ ಬಗ್ಗೆ ಮಾತನಾಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ಇಲ್ಲ , ಫ್ಲೆಕ್ಸ್ ನಲ್ಲಿ ನನ್ನ ಮೇಲಿರುವ ಅಭಿಮಾನಕ್ಕೆ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆ ವದಂತಿಗೆ ತೆರೆ ಎಳೆದಿದ್ದಾರೆ.
ಪಕ್ಷಕ್ಕೆ ಸೇರುವ ಪರಿಸ್ಥಿತಿ ಬಂದಾಗ ಹೇಗೆ ಮಾಡಬೇಕೆಂದು ಯೋಚನೆ ಮಾಡ್ತೀನಿ. ಯೋಗೇಶ್ವರ್ ಅವರಿಗೆ ಬಿಜೆಪಿಗೆ ನಾನು ಬರಬೇಕು ಎಂಬ ಆಸೆ ಇದೆ ಅದೇ ರೀತಿ ಹಲವು ನಾಯಕರು ನನ್ನನ್ನು ಮಾತಾಡಿಸಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ.
ಸುಮಲತಾ ಮಾನಸಿಕವಾಗಿ ಬಿಜೆಪಿ ಜೊತೆಗೆ ಇದ್ದಾರೆ ಅನ್ನಿಸುತ್ತಿದೆ, ಹಳೇ ಮೈಸೂರು ಭಾಗದ ಹಲವು ಮುಖಂಡರು ಬಿಜೆಪಿ ಸೇರ್ತಾರೆ ಎಂದು ಎಂದು ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಹೇಳಿದ್ದರು.