ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ: ಅರ್ಜಿ ವಿಚಾರಣೆಗೆ ಸುಪ್ರಿಂಕೋರ್ಟ್‌ನಿಂದ ಡೇಟ್‌ ನಿಗದಿ

ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ: ಅರ್ಜಿ ವಿಚಾರಣೆಗೆ ಸುಪ್ರಿಂಕೋರ್ಟ್‌ನಿಂದ ಡೇಟ್‌ ನಿಗದಿ

ವದೆಹಲಿ: ಕರ್ನಾಟಕದ ಪದವಿಪೂರ್ವ ಕಾಲೇಜು ಪರೀಕ್ಷೆಗೆ ಹಾಜರಾಗುವಾಗ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಹೋಳಿ ಹಬ್ಬದ ನಂತರ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

ಮಾರ್ಚ್ 9ರಿಂದ ರಾಜ್ಯದಲ್ಲಿ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಪರೀಕ್ಷೆ ಹಾಲ್‌ಗೆ ಹಿಜಾಬ್ ಧರಿಸಲು ಅನುಮತಿ ಇಲ್ಲದೇ ಇರೋದ್ರಿಂದ ಅನುಮತಿ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಸುಪ್ರೀಂಗೆ ಮನವಿ ಸಲ್ಲಿಸಿದ್ದಾರೆ.

ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ, ಸ್ವಲ್ಪ ಸಮಯದ ನಂತರ ಪುನಃ ಈ ಪುಟಕ್ಕೆ ಭೇಟಿ ನೀಡಿ