ಮಂಡ್ಯದಲ್ಲಿ ಮತದಾನಕ್ಕೂ ಮುನ್ನ ಸೋಲೊಪ್ಪಿಕೊಂಡ ಬಿಜೆಪಿ ಅಭ್ಯರ್ಥಿ: ಬಿಜೆಪಿ ಅಭ್ಯರ್ಥಿಗೆ ಬಿಜೆಪಿಯವರೇ ಮೋಸ.?

ಮಂಡ್ಯ: ಜಿಲ್ಲೆಯಲ್ಲಿ ಪರಿಷತ್ ಚುನಾವಣೆ ( Karnataka MLC Election ) ಮತದಾನ ಆರಂಭಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ( BJP Candidate ) ಸೋಲು ಒಪ್ಪಿಕೊಂಡಿದ್ದಾರೆ. ಬಿಜೆಪಿ ಮುಂಖಡರೇ ( BJP Leaders ) ಬಿಜೆಪಿ ಅಭ್ಯರ್ಥಿಗೆ ಮೋಸ ಮಾಡಿದ್ದರ ಬಗ್ಗೆ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ತಾಲೂಕಿನ ಅಮರಾವತಿ ಹೋಟೆಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಬಿಜೆಪಿ ಅಭ್ಯರ್ಥಿಯಾದ ಬೂಕಹಳ್ಳಿ ಮಂಜು, ಮತದಾನಕ್ಕೂ ಮುನ್ನ ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಬಿಜೆಪಿಯವರೇ ಮೋಸ ಮಾಡಿದ್ರಾ ಎನ್ನುವಂತ ದುಖವನ್ನು ಹೊರ ಹಾಕಿದರು. ಮೋಸ ನೆನದು ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ, ಮತದಾರ ನನ್ನ ಕೈ ಬಿಡಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತರು. ಬಿಜೆಪಿ ಮೈತ್ರಿಯಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೆ. ಇದೀಗ ಎಲ್ಲವನ್ನೂ ನೀರಿನಲ್ಲಿ ಹೋಮ ಮಾಡಿದ ಹಾಗೆ ನಮ್ಮ ನಾಯಕರು ಮಾಡ್ತಾ ಇದ್ದಾರೆ. ನನ್ನ ಹೋರಾಟ ನಾನು ಬಿಡುವುದಿಲ್ಲ ಎಂದರು. ಮುಂದುವರೆದು ಮಾತನಾಡಿದಂತ ಅವರು, ಯಾರು ಹೀಗೆ ಮಾಡ್ತಾ ಇದ್ದಾರೆ ನನಗೆ ಗೋತ್ತಿಲ್ಲ. ಈಗ ನಾನು ಏನು ಹೇಳುವುದಿಲ್ಲ. ಈಗ ಎಲ್ಲಾ ಕಾಲ ಮುಗಿದು ಹೋಗಿದೆ. ನಾನು ಕೊನೆ ಕ್ಷಣದ ಹೋರಾಟ ಮಾಡುತ್ತೇನೆ ಎಂಬುದಾಗಿ ಕಣ್ಣೀರಿಡುತ್ತಲೇ ತಿಳಿಸಿದರು.