ಮಗಳ ಮದುವೆಗೆ ಡೇಟ್ ಫಿಕ್ಸ್ ಮಾಡಿ ಎಂದ ಸುನೀಲ್ ಶೆಟ್ಟಿ
ಕೆ.ಎಲ್ ರಾಹುಲ್ & ನಟಿ ಅಥಿಯಾ ಶೆಟ್ಟಿ ಮದುವೆಯ ವಿಷಯಕ್ಕೆ ಪದೇ ಪದೇ ಸುದ್ದಿಯಾಗುತ್ತಿರುತ್ತಾರೆ. ಈ ಮದುವೆ ವದಂತಿಗೆ ನಟ ಸುನೀಲ್ ಶೆಟ್ಟಿ ಬಿಗ್ ಟ್ವಿಸ್ಟ್ ನೀಡಿದ್ದು, ಡೇಟ್ ಫಿಕ್ಸ್ ಆದ ಮೇಲೆ ನನ್ನ ಮಗಳ ಮದುವೆಗೆ ನನ್ನನ್ನು ಕರೆಯಿರಿ ಎಂದಿದ್ದಾರೆ. ಅಥಿಯಾ & ಕೆ.ಎಲ್ ರಾಹುಲ್ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಹಾಗಾಗಿ ಮದುವೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಜನವರಿಯಲ್ಲಿ ಮದುವೆ ಎಂದು ವರದಿಯಾಗಿತ್ತು. ಆದರೆ ಈ ವದಂತಿಯನ್ನು ಸುನೀಲ್ ಶೆಟ್ಟಿ ಅಲ್ಲಗೆಳೆದಿದ್ದಾರೆ