ಆರೋಪಿಗಳ ಸುಳಿವು ನೀಡಿದ್ರೆ ಇನ್ಮುಂದೆ 5 ಲಕ್ಷ ರೂ.ವರೆಗೆ ಬಹುಮಾನ!

ಆರೋಪಿಗಳ ಸುಳಿವು ನೀಡಿದ್ರೆ ಇನ್ಮುಂದೆ 5 ಲಕ್ಷ ರೂ.ವರೆಗೆ ಬಹುಮಾನ!

ಬೆಂಗಳೂರು : ಅಪರಾಧ ಪ್ರಕರಣಗಳ ಅಪರಾಧಿಗಳ ಪತ್ತೆ ಸಂಬಮಧ ಪೊಲೀಸರಿಗೆ ಸುಳಿವು ನೀಡುವ ಖಾಸಗಿ ವ್ಯಕ್ತಿಗಳಿಗೆ ರಾಜ್ಯ ಸರ್ಕಾರವು ಇನ್ಮುಂದೆ ಬರೋಬ್ಬರಿ 5 ಲಕ್ಷ ರೂ. ಬಹುಮಾನ ನೀಡಲಿದೆ.

ಹೌದು, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಕಳ್ಳಸಾಗಾಣಿಕೆ , ಮಾದಕ ವಸ್ತು ಸಾಗಾಣಿಕೆ, ಆಯುಧ ಕಳ್ಳಸಾಗಾಣಿಕೆ ಸೇರಿದಂತೆ ಹಲವು ಸಮಾಜ ಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಭಾರಿ ಬಹುಮಾನ ನೀಡಲು ಸರ್ಕಾರ ನಿರ್ಧರಿಸಿದೆ.ಈ ಕುರಿತು ಗೃಹ ಸಚಿವ ಅರಗಜ್ಞಾನೇಂದ್ರ ಮಾಹಿತಿ ನೀಡಿದ್ದು, , ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ , ಕಳ್ಳಸಾಗಾಣಿಕೆ , ಮಾದಕ ವಸ್ತು ಸಾಗಾಣಿಕೆ, ಆಯುಧ ಕಳ್ಳಸಾಗಾಣಿಕೆ ಸೇರಿದಂತೆ ಹಲವು ಸಮಾಜ ಘಾತುಕ ಚಟುವಟಿಕೆಗಳ ಮಾಹಿತಿ ನೀಡಿದರೆ ಖಾಸಗಿ ವ್ಯಕ್ತಿಗಳಿಗೆ ಪ್ರಕರಣದ ತೀವ್ರತೆ ಆಧಾರದ ಮೇಲೆ ಕನಿಷ್ಠ 20 ಸಾವಿರ ರೂ.ನಿಂದ 5 ಲಕ್ಷ ರೂ.ರವರೆಗೆ ಬಹಮಾನ ಘೋಷಿಸುವ ಪ್ರಸ್ತಾವನೆಗೆ ಅನುಮತಿ ನೀಡಲಾಗಿದೆ.