ಲವ್ ಜಿಹಾದ್ ಮಾಡಲು ಯುವಕರಿಗೆ 5 ಲಕ್ಷ ರೂ.ನೀಡಲಾಗುತ್ತದೆ : ಸಚಿವ ಆರ್. ಅಶೋಕ್ ಆರೋಪ

ಬೆಂಗಳೂರು : ಹೆಣ್ಣು ಮಕ್ಕಳನ್ನು ಲವ್ ಜಿಹಾದ್‍ಗೆ ತಳ್ಳಲು ಯುವಕರಿಗೆ 5 ಲಕ್ಷ ರೂ.ವರೆಗೆ ಸಿಗುತ್ತದೆ. ಈ ಹಣದಲ್ಲಿ ಯುವತಿಯರನ್ನು ಪ್ರೀತಿಯ ಬಲೆ ಬೀಳಿಸಿಕೊಂಡು ಮತಾಂತರ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಯುವತಿಯನ್ನು ಮತಾಂತರ ಮಾಡಿದರೆ 5 ರೂ. ಲಕ್ಷದವರೆಗೆ ಸಿಗುತ್ತದೆ. ಲವ್ ಜಿಹಾದ್ ಮಾಡಲು ಮೊದಲು ಯುವಕರಿಗೆ ತರಬೇತಿ ನೀಡಿ, ಖರ್ಚಿಗೆ ಹಣವನ್ನೂ ನೀಡಲಾಗುತ್ತದೆ. ಈ ಹಣದಲ್ಲಿ ಯುವಕರು ಜಿಮ್ ನಲ್ಲಿ ದೇಹ ದಂಡಿಸಿ ಸದೃಢವಾಗಿಸಿಕೊಳ್ಳುತ್ತಾರೆ.ಯುವತಿರನ್ನು ಮತಾಂತರ ಮಾಡಿ ಮತ್ತೆ ಬೇರೆ ಮದುವೆಯಾಗುತ್ತಾರೆ ಎಂದರು.
ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆಯ ಕಟ್ಟುನಿಟ್ಟಾಗಿ ಜಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.