ಕುಕ್ಕೆಯಲ್ಲಿ ನ.20ರಂದು ಮಧ್ಯಾಹ್ನದವರೆಗೆ ದೇವರ ದರ್ಶನಕ್ಕಿಲ್ಲ ಅವಕಾಶ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ನ.20ರಂದು ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ದೇವರ ದರ್ಶನ ಪಡೆಯಲು ಭಕ್ತಿರಿಗೆ ಅವಕಾಶ ಇರುವುದಿಲ್ಲ. ಚಂಪಾಷಷ್ಠಿ ವಾರ್ಷಿಜ ಜಾತ್ರಾ ಮಹೋತ್ಸವ ಪ್ರಯುಕ್ತ ನ.20ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆ ಭಕ್ತರಿಗೆ ಮಧ್ಯಾಹ್ನ 2 ಗಂಟೆವರೆಗೆ ದೇವರ ದರ್ಶನ & ಸೇವೆ ನೆರವೇರಿಸಲು ಅವಕಾಶವಿಲ್ಲ. 2 ಗಂಟೆ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.