ವಾಯುಪಡೆಗೆ ಶುಭ ಕೋರಿ ಅವರ ಧೈರ್ಯ, ಶ್ರದ್ಧೆಯನ್ನು ಕೊಂಡಾಡಿದ ರಾಷ್ಟ್ರಪತಿ, ಪ್ರಧಾನಿ

ವಾಯುಪಡೆಗೆ ಶುಭ ಕೋರಿ ಅವರ ಧೈರ್ಯ, ಶ್ರದ್ಧೆಯನ್ನು ಕೊಂಡಾಡಿದ ರಾಷ್ಟ್ರಪತಿ, ಪ್ರಧಾನಿ

ನವದೆಹಲಿ : ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಕ್ರವಾರ ವಾಯುಪಡೆ ದಿನದಂದು (Air force day) ಶುಭಾಶಯ ಕೋರಿದರು ಮತ್ತು ಭಾರತೀಯ ವಾಯುಪಡೆ ಧೈರ್ಯ, ಶ್ರದ್ಧೆ ಮತ್ತು ವೃತ್ತಿಪರತೆಗೆ ಸಮಾನಾರ್ಥಕವಾಗಿದೆ ಎಂದು ಹೇಳಿದರು.

ಭಾರತೀಯ ವಾಯುಪಡೆಯನ್ನು 1932 ರಲ್ಲಿ ಒಕ್ಟೋಬರ್ 8 ರಂದು ಸ್ಥಾಪಿಸಲಾಯಿತು.

ಈ ಕುರಿತು ಟ್ವೀಟ್ ಮಾಡಿರುವ ಮೋದಿ, 'ವಾಯುಪಡೆ ದಿನದಂದು ನಮ್ಮ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತೀಯ ವಾಯುಪಡೆ ಧೈರ್ಯ, ಶ್ರದ್ಧೆ ಮತ್ತು ವೃತ್ತಿಪರತೆಗೆ ಸಮಾನಾರ್ಥಕವಾಗಿದೆ. ಸವಾಲುಗಳ ಸಮಯದಲ್ಲಿ ತಮ್ಮ ಮಾನವೀಯ ಮನೋಭಾವದ ಮೂಲಕ ದೇಶವನ್ನು ರಕ್ಷಿಸುವಲ್ಲಿ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.' ಎಂದು ಟ್ವೀಟ್ ಮಾಡಿದರು.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೂ ಕೂಡಾ ವಾಯುಪಡೆಯ ಯೋಧರು ಮತ್ತು ಅವರ ಕುಟುಂಬಗಳಿಗೆ ವಾಯುಪಡೆಯ ದಿನದ ಶುಭಾಶಯಗಳು. ಶಾಂತಿ ಮತ್ತು ಯುದ್ಧದ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಭಾರತೀಯ ವಾಯುಪಡೆಯ ಬಗ್ಗೆ ರಾಷ್ಟ್ರವು ಹೆಮ್ಮೆಪಡುತ್ತದೆ. ಐಎಎಫ್​​ ತನ್ನ ಶ್ರೇಷ್ಠತೆಯ ಗುಣಮಟ್ಟವನ್ನು ಉಳಿಸಿಕೊಳ್ಳುತ್ತದೆ ಎಂದು ನನಗೆ ಖಚಿತವಿದೆ ಎಂದು ಟ್ವೀಟ್ ಮಾಡಿದ್ದಾರೆ.