5Gಗೆ ಅಪ್​ಡೇಟ್ ನೆಪದಲ್ಲಿ ಸುಲಿಗೆ : ಕರೆ ಮಾಡಿ OTP ಕೇಳುವವರ ಬಗ್ಗೆಎಚ್ಚರ : ಡಿಸಿಪಿ ಡಾ.ಶರಣಪ್ಪ ಮನವಿ

5Gಗೆ ಅಪ್​ಡೇಟ್ ನೆಪದಲ್ಲಿ ಸುಲಿಗೆ : ಕರೆ ಮಾಡಿ OTP ಕೇಳುವವರ ಬಗ್ಗೆಎಚ್ಚರ : ಡಿಸಿಪಿ ಡಾ.ಶರಣಪ್ಪ ಮನವಿ

ಬೆಂಗಳೂರು : ದೇಶಾದ್ಯಂತ ಮೊಬೈಗಳಿಗೆ 5Gಗೆ ಅಪ್​ಡೇಟ್ ಮಾಡಲಾಗುತ್ತಿದೆ. ಈ ವಿಚಾರವಾಗಿ ಕರೆ ಮಾಡಿ ಓಟಿಪಿ ಕೇಳುವವರ ಬಗ್ಗೆಎಚ್ಚರ ವಹಿಸಬೇಕಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ

ಜನರು ಕೂಡ 4Gಯಿಂದ 5Gಗೆ ತಮ್ಮ ನೆಟ್​ವರ್ಕ್ ಅಪ್ಡೇಟ್ ಮಾಡಲು ಭರದಲ್ಲಿದ್ದಾರೆ. ಇದನ್ನೆ ಬಂಡವಾಳ‌ ಮಾಡಿಕೊಂಡ ಸೈಬರ್ ಖದೀಮರು ಅಪ್​ಡೇಟ್ ಹೆಸರಲ್ಲಿ ಸುಲಿಗೆ ಮಾಡಲು ಮುಂದಾಗಿದ್ದಾರೆ. ಸೈಬರ್ ವಂಚಕರ ತಂಡ 5G ವಂಚನೆಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಹಾಗೂ ಸಿಸಿಬಿ ಹೊಸ ವಂಚನೆ ತಡೆಯಲು ಜಾಗೃತಿ ಮೂಡಿಸಲಾಗುತ್ತಿದೆ.

ಕಾಲ್​ ಸೆಂಟರ್​ಗಳಿಂದ ಕರೆ ಮಾಡುವ ಮೂಲಕ ಹೊಸ ವಂಚನೆಗೆ ಸಿದ್ಧವಾಗುತ್ತಿರುವ ವಂಚಕರ ಗ್ಯಾಂಗ್ ಏರ್​ಟೆಲ್, ಜಿಯೋ ಸೇರಿದಂತೆ ಹಲವು ನೆಟ್​ವರ್ಕ್​ಗಳಿಂದ ನಿಮ್ಮ ಸಿಮ್ ಅಪ್​ಡೇಟ್​ ಮಾಡುತ್ತೇವೆ ಎಂದು ಕರೆ ಮಾಡುತ್ತಾರೆ.

ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳುವ ಈ ಗ್ಯಾಂಗ್ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದರೆ ಮುಗೀತು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ.

ಈ ಕಾರಣದಿಂದ ಸಿಸಿಬಿ ಮತ್ತು ಸೆನ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಅಪ್​ಡೇಟ್ ಇದ್ದರೂ ಅದನ್ನು ಸಂಬಂಧಪಟ್ಟ ನೆಟ್​ವರ್ಕ್ ಕಚೇರಿಗಳಲ್ಲಿ ಮಾಡಿಸಿ, ಸುಖಾಸುಮ್ಮನೆ ಒಟಿಪಿ ಹೇಳಿ ಪೇಚಿಗೆ ಸಿಲುಕದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಅಂತಹ ಕರೆ ಬಂದರೆ ಅಥವಾ ವಂಚನೆಯಾದರೆ ತಕ್ಷಣ 122ಗೆ ಕರೆ ಮಾಡುವಂತೆ ನಗರ ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ ಮನವಿ ಮಾಡಿದ್ದಾರೆ.

್ಪ ಮನವಿ ಮಾಡಿದ್ದಾರೆ.