ಕುಡಿದ ಅಮಲಿನಲ್ಲಿ ಬಿಯರ್ ಬಾಟಲಿಯಿಂದ ಯುವಕನಿಗೆ ಇರಿದ ಪುಂಡರು | Hoskote |
ಬಾರ್ ಮುಂದೆ ಕಬಾಬ್ ತೆಗೆದುಕೊಳ್ಳಲು ಹೋದಾಗ ಯುವಕನ ಮೇಲೆ ಪೆÇೀಕರಿ ಯುವಕರು ಪುಂಡಾಟ ಮೆರೆದು ಬಿಯರ್ ಬಾಟಲಿಯಿಂದ ಯುವಕನಿಗೆ ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ನಡೆದಿದೆ. ಆನಂದ್ ಇರಿತಕ್ಕೊಳಗಾದ ಯುವಕ. ಇದೇ 26ರ ರಾತ್ರಿ 9 ಗಂಟೆಗೆ ಪಲ್ಲವಿ ಬಾರ್ ಬಳಿ ಆನಂದ್ ಕಾಬಬ್ ತೆಗೆದುಕೊಳ್ಳಲು ತೆರಳಿದ್ದ. ಈ ವೇಳೆ ನಂದಗುಡಿ ಗ್ರಾಮದ ರೋಹನ್, ಮಧು, ಚಂದನ್ ಸೇರಿದಂತೆ ಐದು ಜನ ಸಹಚರರು ಕುಡಿದ ಅಮಲಿನಲ್ಲಿ ರೇಗಿಸಿದ್ದಾರೆ. ಆಗ ಆನಂದ್ ಹಾಗೂ ಪೆÇೀಕರಿ ಗ್ಯಾಂಗ್ ನಡುವೆ ಮಾತು ಬೆಳೆದು ಪುಂಡರು ಬಿಯರ್ ಬಾಟಲಿಯನ್ನ ಹೊಡೆದು ಬೆನ್ನಿನ ಹಿಂಭಾಗ ಇರಿದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆನಂದ್ ಹೊಸಕೋಟೆಯ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆನಂದ್ ಕುಟುಂಬಸ್ಥರು ನಂದಗುಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪುಂಡರ ಗ್ಯಾಂಗ್ ನಾಪತ್ತೆಯಾಗಿದ್ದು, ಪೆÇಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.