ಬಸವೇಶ್ವರ ಶುಗರ್ಸ್ ನಿಂದ ಹಂಗಾಮು ದರ ನಿಗದಿ

ಕಬ್ಬಿನ ಬಾಕಿ ಪಾವತಿ ಹಾಗೂ ಹಂಗಾಮು ದರ ನಿಗದಿಪಡಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟ ಕಳೆದೆರಡು ತಿಂಗಳ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.ಕಾರಜೋಳದ ಬಸವೇಶ್ವರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಇ.ದಯಾಳನ್ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬಿನ ಹಂಗಾಮು ದರ ಪ್ರತಿ ಟನ್ ಕಬ್ಬಿಗೆ ₹2,700 ಮೊದಲ ಕಂತಿನ ದರ ಘೋಷಿಸಿ ನಾಳೆಯಿಂದಲೇ ಬಿಲ್ಲಿಂಗ್ ಆರಂಭಿಸುವುದಾಗಿ ಕಬ್ಬು ಬೆಳೆಗಾರರ ಸಭೆಯಲ್ಲಿ ಘೋಷಿಸಿದ್ದಾರೆ. ಜೊತೆಗೆ ಕಳೆದ ವರ್ಷದ ಎರಡನೇ ಕಂತಿನ ರೂ.145 ಬಾಕಿ ಪಾವತಿಗಾಗಿ ಎರಡು ತಿಂಗಳು ಕಾಲಾವಕಾಶ ಕೇಳಿದ್ದಾರೆ. ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಹಂಗಾಮು ಕಬ್ಬಿನ ದರ ನಿಗದಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಶುಕ್ರವಾರ ಕಾರ್ಖಾನೆ ಆವರಣದಲ್ಲಿ ಕರೆದಿದ್ದ ಕಬ್ಬು ಬೆಳೆಗಾರರ ಮಹತ್ವದ ಸಭೆಯಲ್ಲಿ ಬಸವೇಶ್ವರ ಕಾರ್ಖಾನೆ ಜಿಎಂ ಇ.ದಯಾಳನ್ ರೈತರ ಪ್ರತಿಭಟನೆಗೆ ಮಣಿದು ಅಂತಿಮವಾಗಿ ಸಭೆಯಲ್ಲಿ ಹಂಗಾಮು ದರ ಘೋಷಿಸಿದರು. ಕಬ್ಬು ಬೆಳೆಗಾರರ ಸಭೆಯ ಆರಂಭದಲ್ಲಿ ಹಂಗಾಮು ದರ ₹2,700 ಹಣವನ್ನು ಎರಡು ಹಂತದಲ್ಲಿ ನೀಡುವುದಾಗಿ ಹೇಳಿ ಕಳೆದ ವರ್ಷದ ಬಾಕಿ ₹145 ನೀಡಲು ನಿರಾಕರಿಸಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು ಕಬ್ಬು ಸಾಗಟ ಸ್ಥಗಿತಗೊಳಿಸಿ ಸಂಜೆವರೆಗೂ ಪ್ರತಿಭಟನೆ ಮಾಡಿ ಬಿಗಿ ಪಟ್ಟು ಹಿಡಿದರು. ರೈತರ ಒತ್ತಾಯಕ್ಕೆ ಮಣಿದು ಜಿಎಂ ದಯಾಳನ್ ಕಾರ್ಖಾನೆ ಕಬ್ಬಿನ ಹಂಗಾಮು ದರ ₹2,700 ಘೋಷಿಸಿದರು...