ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ
ಶಿಗ್ಗಾಂವ್
ಪ್ರಧಾನ ಮಂತ್ರಿ ನರೇಂದ್ರಮೋದಿರವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಶಿಗ್ಗಾಂವ್ ಪುರಸಭೆ ವ್ಯಾಪ್ತಿಯ 10 ಅಂಗನವಾಡಿ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಯಿತು. ಈ ವೇಳೆ ಅಂಬೇಡ್ಕರ್ ಭವನದ ಹತ್ತಿರ ಅಂಗನವಾಡಿ ಕೇಂದ್ರದಲ್ಲಿ ಹಾವೇರಿ ಜಿಲ್ಲಾ ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷರು ಮತ್ತು ಶಿಗ್ಗಾಂವ್ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ 2ನೇ ಲಸಿಕೆ ಹಾಕಿಸಿಕೊಳ್ಳುವುದರ ಮುಖಾಂತರ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ ಪಿ.ಎಚ್. ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಮನೋಜ ನಾಯ್ಕ, ಬಿಜೆಪಿ ಪದಾಧಿಕಾರಿಗಳಾದ ವಿನಯ ಮುಂಡಗೋಡ, ಕಾಶೀನಾಥ್ ಕಳ್ಳಿಮನಿ, ಸಂತೋಷ ದೊಡ್ಡಮನಿ, ಸರೋಜಾ ಹರಿಹನ, ಮಹ್ಮದ ಜಾಪರ, ಎಂ.ಐ.ಶುಶ್ರೂಷಾ, ಅಧಿಕಾರಿಗಳಾದ ಆಸ್ಟ್ರಾ , ಚನ್ನಮ್ಮ, ರತ್ನಾ, ಸುಮಿತ್ರಾ, ಹುಚ್ಚಮ್ಮಾ ಶಿಕ್ಷಕ ಬಸವರಾಜ ಸವಡಿ, ಜೆ.ಜಿ.ದೇವರಮನಿ, ಆಶಾ ಅಂಗನವಾಡಿ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.