ರಾಂಗ್ ರೂಟಲ್ಲಿ ವೇಗವಾಗಿ ಹೋಗ್ತಿದ್ದ ಚಾಲಕ; ಗಾಬರಿಗೊಂಡು ಆಟೋದಿಂದ ಜಿಗಿದ ವಿದ್ಯಾರ್ಥಿನಿ

ರಾಂಗ್ ರೂಟಲ್ಲಿ ವೇಗವಾಗಿ ಹೋಗ್ತಿದ್ದ ಚಾಲಕ; ಗಾಬರಿಗೊಂಡು ಆಟೋದಿಂದ ಜಿಗಿದ ವಿದ್ಯಾರ್ಥಿನಿ

ಟೋ ಚಾಲಕ ರಾಂಗ್ ರೂಟ್ ನಲ್ಲಿ ಕರೆದುಕೊಂಡು ಹೋಗ್ತಿದ್ದರಿಂದ ಗಾಬರಿಗೊಂಡ ವಿದ್ಯಾರ್ಥಿನಿ ಚಲಿಸುತ್ತಿದ್ದ ಆಟೋದಿಂದ್ಲೇ ಜಿಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕೊಹೆಫಿಜಾ ಪ್ರದೇಶದಲ್ಲಿ ಚಾಲಕ ತಪ್ಪು ದಿಕ್ಕು ಹಿಡಿದ ನಂತರ ವೈದ್ಯಕೀಯ ವಿದ್ಯಾರ್ಥಿನಿ ವೇಗವಾಗಿ ಚಲಿಸ್ತಿದ್ದ ಆಟೋದಿಂದ ಜಿಗಿದಿದ್ದಾಳೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಆಟೋ ಚಾಲಕ ತನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ವಿದ್ಯಾರ್ಥಿನಿ ಹೆದರಿದ್ದಳು.

ವಿದ್ಯಾರ್ಥಿನಿ ಬೈರಾಗರ್‌ನಿಂದ ಲಾಲ್‌ಘಾಟಿಗೆ ಆಟೋದಲ್ಲಿ ಕುಳಿತಿದ್ದಳು. ಚಾಲಕ ವೇಗವಾಗಿ ಆಟೋ ಓಡಿಸುತ್ತಿದ್ದ ಮತ್ತು ಆಕೆಯ ಗಮ್ಯಸ್ಥಾನದ ಬದಲಿಗೆ ಅವನು ಆಟೋವನ್ನು ಬೇರೆ ಕಡೆಗೆ ತಿರುಗಿಸಿದನು. ಇದರಿಂದ ಗಾಬರಿಗೊಂಡ ಆಕೆ ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.