ಮಂಡ್ಯದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರೂ. ಮೌಲ್ಯದ ಕುಕ್ಕರ್ ಜಪ್ತಿ

ಮಂಡ್ಯ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಈಗಾಗಲೇ ಮೂರು ಪಕ್ಷಗಳ ಪ್ರಚಾರ ಬೇಟೆ ಜೋರಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಹೀಗಾಗಿ ಕೆಲ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ.
ಮಂಡ್ಯದಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರೂ ಮೌಲ್ಯದ ಕುಕ್ಕರ್ ಗಳನ್ನು ನಾಗಮಂಡಲ ತಾಲೂಕಿನ ಕದಬಳ್ಳಿ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ.
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟ್ಮೆನರ್ ಲಾರಿನಲ್ಲಿ ಸಾಗಿಸುತ್ತಿದ್ದ ವೇಳೆ ತಪಾಸಣೆ ಮಾಡಿದಾಗ ಕುಕ್ಕರ್ ಗಳು ಪತ್ತೆಯಾಗಿವೆ. ಶೃಂಗೇರಿ ಶಾಸಕ ಜಿ.ಡಿ ರಾಜೇಗೌಡ ಅವರಿಗೆ ಸೇರಿದ ಕುಕ್ಕರ್ ಗಳು ಇವಾಗಿದ್ದು ಕ್ಷೇತ್ರದ ಮತದಾರರಿಗೆ ಹಂಚಲು ಬಾಳೆಹೊನ್ನೂರಿನಿಂದ ಖರೀದಿಸಿ ತೆಗೆದುಕೊಂಡು ಬರುತ್ತಿದ್ದರು. ಪೊಲೀಸರು ತಪಸಾಣೆ ನಡೆಸಿದಾಗ ಕುಕ್ಕರ್ ಮತ್ತು ಹಣವನ್ನು ಜಪ್ತಿ ಮಾಡಲಾಗಿದೆ. ಈ ವೇಳೆ ಶಾಸಕ ಹಾಗೂ ಅಂಗಡಿ ಮಾಲೀಕ ವಿರುದ್ಧ ಬಿಂಡಿಗನವಿಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.