ಬೆಂಗ್ಳೂರಲ್ಲಿ ʼಸಂಚಾರ ದಟ್ಟಣೆ ನಿವಾರಣೆʼಗೆ BBMP ಮಾಸ್ಟರ್‌ ಪ್ಲಾನ್‌ : ಈ ವರ್ಷ ತಲೆ ಎತ್ತಲಿವೆ ʼ5 ಫ್ಲೈಓವರ್‌ಗಳು

ಬೆಂಗ್ಳೂರಲ್ಲಿ ʼಸಂಚಾರ ದಟ್ಟಣೆ ನಿವಾರಣೆʼಗೆ BBMP ಮಾಸ್ಟರ್‌ ಪ್ಲಾನ್‌ : ಈ ವರ್ಷ ತಲೆ ಎತ್ತಲಿವೆ ʼ5 ಫ್ಲೈಓವರ್‌ಗಳು

ಬೆಂಗಳೂರು: ಐಟಿಸಿಟಿ ಅಂದ್ರೆ ಸದಾ ಸಂಚಾರ ದಟ್ಟನೆ ಇರುವ ಭಾಗವಾಗಿದ್ದು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಬಿಬಿಎಂಪಿ ಮುಂದಾಗಿದ್ದು, ನಗರದಲ್ಲಿ ನಾಲ್ಕೈದು ಫ್ಲೈಓವರ್ ನಿರ್ಮಾಣಕ್ಕೆ ಮಾಸ್ಟರ್‌ ಪ್ಲಾನ್ ಮಾಡಲಾಗಿದೆ.

ಬೆಂಗಳೂರಿನ ಪಶ್ಚಿಮ ವಲಯ, ದಾಸರಹಳ್ಳಿ ವಲಯ ಮತ್ತು ಯಲಹಂಕ ವಲಯಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಆಗ್ತಿದೆ. ಭಾಗಗಳನ್ನ ಗುರುತಿಸಿ ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದೆ. ಈ ವರ್ಷದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯವೂ ಭರದಿಂದ ಪ್ರಾರಂಭ ಮಾಡಲಾಗುತ್ತಿದೆ. ಇದರಿಂದ ಸಿಟಿಯಲ್ಲಿ ಸಂಚಾರ ಮಾಡುವ ಜನರಿಗೆ ಅನುಕೂಲವಾಗಲಿದೆ.

ಯಾವೆಲ್ಲ ಸ್ಥಳಗಳಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯ :

ಮತ್ತಿಕೆರೆ ತಿರುವಿನ ಗೋಕುಲ್ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಾಣ - 40 ಕೋಟಿ ವೆಚ್ಚ
> ಜಾಲಹಳ್ಳಿ ಬಳಿಯ ಓಆರ್‍ಆರ್ ಪೈಪ್‍ಲೈನ್ ಬಳಿ ಫ್ಲೈ ಓವರ್ - 40 ಕೋಟಿ ವೆಚ್ಚ
> ಮೇಖ್ರಿ ಸರ್ಕಲ್ ಅಂಡರ್ ಪಾಸ್‍ನಿಂದ ಜಯಮಹಲ್ ರಸ್ತೆವರೆಗೂ ಫ್ಲೈ ಓವರ್ - 65 ಕೋಟಿ
> ಸದಾಶಿವನಗರ ಪೊಲೀಸ್ ಸ್ಟೇಷನ್ ಸರ್ಕಲ್ ಬಳಿ ಫ್ಲೈ ಓವರ್ - 40 ಕೋಟಿ
> ಯಲಹಂಕ ರೈತ ಸಂತೆ ಬಳಿ ಅಂಡರ್ ಪಾಸ್ ನಿರ್ಮಾಣವಾಗಲಿದೆ.