#BoycottPathan; 'ಪಠಾಣ್’ ಸಿನಿಮಾಗೆ ಬೈಕಾಟ್ ಬಿಸಿ

ಪಠಾಣ್ ಸಿನಿಮಾ ಹಾಡಿನಲ್ಲಿ ದೀಪಿಕಾ ಕಾಣಿಸಿಕೊಂಡ ಪರಿ ಹಲವರ ಕೆಂಗಣ್ಣಿಗೆ ಕಾರಣವಾಗಿದೆ. ಕೇಸರಿ ಬಿಕಿನಿಯಲ್ಲಿ ದೀಪಿಕಾ ಕುಣಿದಿದ್ದಾರೆ ಎನ್ನುವುದು & ಅದು ಶಾರುಖ್ ಖಾನ್ ನಟನೆಯ ಚಿತ್ರ ಎನ್ನುವ ಕಾರಣಕ್ಕಾಗಿ ವಿವಾದ ಎದ್ದಿದೆ. ಇದರ ಬೆನ್ನಲ್ಲೆ ಸಿನಿಮಾವನ್ನ ಬೈಕಾಟ್ ಮಾಡಬೇಕು ಎಂದು ಟ್ವಿಟರ್ನಲ್ಲಿ #BoycottPathan ಟ್ರೆಂಡ್ ಆಗಿದೆ. ಸಾಕಷ್ಟು ಕಷ್ಟಪಟ್ಟು ಶಾರುಖ್ ‘ಪಠಾಣ್’ ಚಿತ್ರ ಮಾಡಿದ್ದಾರೆ. ಆದರೆ ಬಹಿಷ್ಕಾರದ ಬಿಸಿಯಿಂದಾಗಿ ಈ ಸಿನಿಮಾಗೆ ಸೋಲಿನ ಭಯ ಎದುರಾಗಿದೆ.