ರಾಜಸ್ಥಾನದ ಮಂಡಳಿ, ನಿಗಮಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಯೋಜನೆ: ಗೆಹಲೋತ್

ರಾಜಸ್ಥಾನದ ಮಂಡಳಿ, ನಿಗಮಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಯೋಜನೆ: ಗೆಹಲೋತ್

ಜೈಪುರ: ರಾಜಸ್ಥಾನದ ವಿವಿಧ ಮಂಡಳಿಗಳು ಮತ್ತು ನಿಗಮಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಯೋಜನೆಯಡಿ(ಒಪಿಎಸ್) ಸೌಲಭ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಶುಕ್ರವಾರ ಘೋಷಿಸಿದ್ದಾರೆ.

ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಮಾಡುವುದಾಗಿ ಕಳೆದ ವರ್ಷದ ಬಜೆಟ್‌ನಲ್ಲಿ ಗೆಹಲೋತ್ ಘೋಷಿಸಿದ್ದರು.

ಇದೀಗ, ಮಂಡಳಿ ಮತ್ತು ನಿಗಮಗಳ ಸಿಬ್ಬಂದಿಗೂ ವಿಸ್ತರಿಸಿದ್ದಾರೆ.

ರಾಜಸ್ಥಾನದ ವಿಧಾನಸಭೆಯಲ್ಲಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದ ಗೆಹಲೋತ್, ನಿಗಮ, ಅಕಾಡೆಮಿಗಳು ಮತ್ತು ವಿಶ್ವವಿದ್ಯಾಲಯಗಳ ಸಿಬ್ಬಂದಿಗೂ ಹಳೆಯ ಪಿಂಚಣಿ ಪದ್ಧತಿಯ ಪ್ರಯೋಜನಗಳನ್ನು ನೀಡುವುದಾಗಿ ಘೋಷಿಸಿದರು.

ಒಪಿಎಸ್ ವಿಸ್ತರಣೆಯಿಂದ 1 ಲಕ್ಷಕ್ಕೂ ಅಧಿಕ ನೌಕರರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.