ಉದ್ಯಮಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಗಳಲ್ಲಿ ಭೂ ಬ್ಯಾಂಕ್ ಸ್ಥಾಪನೆ

ಉದ್ಯಮಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಗಳಲ್ಲಿ ಭೂ ಬ್ಯಾಂಕ್ ಸ್ಥಾಪನೆ

ಬೆಂಗಳೂರು,ನ.22- ಮುಂದಿನ ವರ್ಷದ 2022-23ರ ನವೆಂಬರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲ್ಯಾಂಡ್ ಬ್ಯಾಂಕ್ ( ಭೂ ಬ್ಯಾಂಕ್ ) ಸ್ಥಾಪಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ತೀರ್ಮಾನಿಸಿದೆ.

ಇದೇ ವೇಳೆ ರಾಜ್ಯಾದ್ಯಂತ ಇರುವ ಕೈಗಾರಿಕಾ ಪಾರ್ಕ್‍ಗಳನ್ನು ಅಭಿವೃದ್ಧಿ ಪಡಿಸಲು ಸಹಾ ಮುಂದಾಗಿರುವ ಇಲಾಖೆ, ಉದ್ಯಮಿಗಳು ಸುಲಭವಾಗಿ ವ್ಯಾಪಾರ - ವಹಿವಾಟು ನಡೆಸಲು ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರ್ಧರಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಹೂಡಿಕೆದಾರರು ಭವಿಷ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬಹುದಾದ ಭೂಮಿ ಗುರುತಿಸಲು ಪ್ರಾರಂಭಿಸಿದೆ.

ರಾಜ್ಯಕ್ಕೆ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು, ಕೈಗಾರಿಕೆಗಳ ಸ್ಥಾಪನೆಯ ಉದ್ದೇಶಕ್ಕೆಂದೇ ಮೀಸಲಿಟ್ಟ ಭೂಮಿ ನಮ್ಮಲ್ಲಿ ಇರಬೇಕು. ಈ ಕಾರಣಕ್ಕೆ, ಲಭ್ಯ ಭೂಮಿಯ ಬಗ್ಗೆ ಜಿಲ್ಲಾವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಭೂ ಸ್ವಾೀನ ಪ್ರಕ್ರಿಯೆ ಕಷ್ಟದ ಕೆಲಸ ಆಗುತ್ತಿದೆ. ಹೀಗಾಗಿ, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿ ನಮ್ಮಲ್ಲಿ ಲಭ್ಯವಿದೆ ಎಂಬ ಭಾವನೆಯನ್ನು ಹೂಡಿಕೆದಾರರಲ್ಲಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಈ ನಿರ್ಧಾರಕ್ಕೆ ಬಂದಿದ್ದಾರೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರು ಬಂದಾಗ 24 ಗಂಟೆಯಲ್ಲಿ ಭೂಮಿ ಸಿಗುವಂತೆ ಆಗಬೇಕು. ಯಶಸ್ವಿ ಉದ್ಯಮಿಗಳಿಗೆ ನೀರು, ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಎಲ್ಲ ಜಿಲ್ಲೆಗಳಲ್ಲಿ ಸಿಗುವಂತೆ ಮಾಡಲಿದ್ದೇವೆ. ಅನೇಕ ಕಡೆ ನಿವೇಶನಗಳು ಸಿಗುತ್ತಿಲ್ಲ. ಅಂತಹ ಎಲ್ಲ ಜಿಲ್ಲೆಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಕನಿಷ್ಠ 500 ಎಕರೆ ಭೂಸ್ವಾೀನ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದೇವೆ ಎನ್ನುತ್ತಾರೆ ಸಚಿವ ನಿರಾಣಿ.

ಭೂಮಿ ಎಂದರೆ ಹೆಚ್ಚಿನ ಹೂಡಿಕೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡುತ್ತಾರೆ, ಹೀಗಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಾರೆ. ಹಲವಾರು ಹೂಡಿಕೆದಾರರು ಮತ್ತು ಸಂಸ್ಥೆಗಳು ಹೂಡಿಕೆದಾರರ ಸಮಾವೇಶಕ್ಕೆ ಬಂದಾಗ, ಪ್ರತಿ ಜಿಲ್ಲೆಯಲ್ಲೂ ಸುಲಭವಾಗಿ ಲಭ್ಯವಿರುವ ಭೂಮಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಪ್ರತಿ ಜಿಲ್ಲೆಯಲ್ಲೂ ಅವರಿಗೆ ಅಗತ್ಯವಿರುವ ಭೂಮಿಯನ್ನು ಒದಗಿಸುವ ಸ್ಥಿತಿಯಲ್ಲಿ ನಾವು ಇರಬೇಕು. ಹೂಡಿಕೆದಾರರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಭೂಮಿಯನ್ನು ಒದಗಿಸಲು ಉತ್ಸುಕರಾಗಿದ್ದಾರೆ ಎಂಬ ಅಭಿಪ್ರಾಯವನ್ನು ಮೂಡಿಸಲು ಇಲಾಖೆಯ ಅಕಾರಿಗಳು ಕಾರ್ಯೋನ್ಮಖರಾಗಿದ್ದಾರೆ.

ಯೋಜನೆಗಳಿಗೆ ಸರ್ಕಾರ ಅನುಮೋದನೆ ಪಡೆದ ತಕ್ಷಣ, ಆ ಯೋಜನೆಯ ಹೂಡಿಕೆದಾರರನ್ನು ಬ್ಯಾಂಕುಗಳು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ಇಲಾಖೆ ಶೀಘ್ರದಲ್ಲಿ ರೂಪಿಸಲಿದೆ. ಆ ಮೂಲಕ, ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವ ಪ್ರಯತ್ನವನ್ನು ನಿರಾಣಿ ಮಾಡಿದ್ದಾರೆ. ಮಹತ್ವಾಕಾಂಕ್ಷಿಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2022ರ ಮಾರ್ಚ್‍ನಲ್ಲಿ ಆಯೋಜಿಸುವ ಚಿಂತನೆ ಇದೆ. ಕೋವಿಡ್ ಕಾರಣದಿಂದ, ಈ ವರ್ಷ ಸಮಾವೇಶ ನಡೆಸಲು ಸಾಧ್ಯವಾಗಿಲ್ಲ.

2022ರ ಸಮಾವೇಶದ ವೇಳೆಗೆ ಭೂಮಿ, ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಮತ್ತು ಇತರ ಮೂಲಸೌಲಭ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಬೇಕಿದೆ ಎಂದು ಹೇಳುತ್ತಾರೆ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸೂಕ್ತವಾದ 5,000 ಎಕರೆ ಅಭಿವೃದ್ಧಿಪಡಿಸಿದ ಭೂಮಿಯನ್ನು ಸ್ವಾೀನಪಡಿಸಿಕೊಂಡಿದ್ದು, ಹೂಡಿಕೆದಾರರು ಆಗಮಿಸಿದಾಗ ಮುಂದಿನ ವರ್ಷದ ಅಂತ್ಯದ ವೇಳೆಗೆ ಕನಿಷ್ಠ 30,000 ಎಕರೆ ಸಿದ್ಧವಾಗಬೇಕು. ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಭೂಮಾಪಕರು ಮತ್ತು ಜಿಲ್ಲಾ ಉಪ ಆಯುಕ್ತರು ಸೂಕ್ತ ಭೂಮಿಯನ್ನು ಗುರುತಿಸಿ ಕೆಐಎಡಿಬಿಗೆ ಪರಿವರ್ತಿಸಲು ಅಕಾರಿಗಳಿಗೆ ನಿರಾಣಿ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಪ್ರಸ್ತುತ, ರಾಜ್ಯದಾದ್ಯಂತ 72,000 ಎಕರೆಗಳಲ್ಲಿ 188 ಕೈಗಾರಿಕಾ ಪ್ರದೇಶಗಳಿವೆ. ಇದಲ್ಲದೆ, ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ದಾಬಸ್ ಪೇಟೆ, ವೇಮಗಲ್, ಗೌರಿಬಿದನೂರು ಮತ್ತು ಮಾಗಡಿಯಲ್ಲಿ ತಲಾ 800 ಎಕರೆ, ಹಾರೋಹಳ್ಳಿಯಲ್ಲಿ 1,600 ಎಕರೆ, ದೇವನಹಳ್ಳಿಯಲ್ಲಿ 1,700 ಎಕರೆ ಮತ್ತು ಕೋಲಾರದಲ್ಲಿ 600 ಎಕರೆ ಸ್ವಾೀನಪಡಿಸಿಕೊಳ್ಳಲು ಇಲಾಖೆ ಮುಂದಾಗಿದೆ.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸಲು ಧಾರವಾಡದಲ್ಲಿ 6,000 ಎಕರೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ 3,300 ಎಕರೆ ಸ್ವಾೀನಪಡಿಸಿಕೊಳ್ಳಲಾಗುವುದು.ವಿವಿಧ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಜಿಲ್ಲೆಯಲ್ಲಿ ಒಂದು ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಯೋಜಿಸುತ್ತಿದೆ.

ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಕಲಬುರ್ಗಿಯಲ್ಲಿ ಜವಳಿ ಮತ್ತು ಆಭರಣ ಪಾರ್ಕ್, ಹುಬ್ಬಳ್ಳಿ-ಧಾರವಾಡದಲ್ಲಿ ಐಟಿ ಪಾರ್ಕ್, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ಅನ್ನು ಕಲ್ಪಿಸಲಾಗಿದೆ. ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್‍ಗಳಲ್ಲಿ ತಲಾ 500 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‍ಶಿಪ್‍ಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.

ಈ ಹಿಂದೆ 2008- 2013 ರ ಬಿಜೆಪಿ ಸರಕಾರದ ಅವಯಲ್ಲಿ ವಿಶ್ವ ಬಂಡವಾಳ ಹೂಡಿಕೆ ಸಮಾವೇಶ ನಡೆಸಿ ಲ್ಯಾಂಡ್ ಬ್ಯಾಂಕ್ (ಭೂಮಿ ಬ್ಯಾಂಕ್) ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿತ್ತು. ಕೃಷಿ, ನೀರಾವರಿಗೆ ಯೋಗ್ಯವಲ್ಲದ ಜಾಗವನ್ನು ಮುಂಚಿತವಾಗಿ ಸ್ವಾೀನ ಪಡಿಸಿಕೊಂಡು ಅದನ್ನು ಕೈಗಾರಿಕೆಗಳಿಗೆ ಮೀಸಲಿಡುವುದು ಇದರ ಉದ್ದೇಶವಾಗಿತ್ತು.ಅದರಂತೆ, ಜಮೀನು ಗುರುತಿಸಿ ಅಸೂಚನೆ ಹೊರಡಿಸುವ ಪ್ರಕ್ರಿಯೆಗೂ ಚಾಲನೆ ಕೊಡಲಾಗಿತ್ತು.
ಆದರೆ, 2013ರಲ್ಲಿ ಅಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗಾರಿಕೆಗಳಿಗೆ ಅಗತ್ಯ ಜಮೀನು ಒದಗಿಸುವ ಸಂಬಂಧ ಸ್ಥಾಪಿಸಲಾದ ಲ್ಯಾಂಡ್ ಬ್ಯಾಂಕ್ ವಿಸರ್ಜಿಸಲು ತೀರ್ಮಾನಿಸಿತ್ತು.

ಅಕಾರಿಗಳು ಕೈಗಾರಿಕೆಗಳ ಬಳಕೆಗೆ ಜಮೀನು ಭೂಸ್ವಾೀನ ಮಾಡುವ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ರೈತರು ಬಳಕೆ ಮಾಡುವ ಕೃಷಿ ಜಮೀನನ್ನು ಭೂ ಸ್ವಾೀನ ಮಾಡದಂತೆ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಕೃಷಿಗೆ ಬಳಕೆ ಮಾಡದ, ಹಾಗೂ ಸ್ವಯಂಪ್ರೇರಿತವಾಗಿ ಜಮೀನು ನೀಡಲು ಮುಂದೆ ಬಂದರೆ ಮಾತ್ರ ಸ್ವಾೀನ. ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಲವಂತದ ಭೂ ಸ್ವಾೀನ ಮಾಡಿಕೊಳ್ಳದಂತೆ ಸಂಬಂಧ ಪಟ್ಟವರಿಗೆ ಸೂಚಿಸಿದ್ದಾರೆ.