ಇಡಿ ವಿಚಾರಣೆ ಮುಕ್ತಾಯ; ಡಿಕೆ. ಶಿವಕುಮಾರ್​ಗೆ ಬಿಜೆಪಿ ಸೇರಲು ಇದೆಯಾ ಒತ್ತಡ ?

ಇಡಿ ವಿಚಾರಣೆ ಮುಕ್ತಾಯ; ಡಿಕೆ. ಶಿವಕುಮಾರ್​ಗೆ ಬಿಜೆಪಿ ಸೇರಲು ಇದೆಯಾ ಒತ್ತಡ ?

ವದೆಹಲಿ: ಇಂದು ಡಿ.ಕೆ ಶಿವಕುಮಾರ್​ ಸತತ ಮೂರು ಗಂಟೆಗಳ ಕಾಲ ನವದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸಿದ್ದು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

'ಇಡಿ ಕಡೆಯವರು ಮತ್ತಷ್ಟು ದಾಖಲೆಗಳನ್ನು ಕೇಳಿದ್ದಾರೆ. ಅದರೊಂದಿಗೆ ನನಗೆ ಮತ್ತು ನನ್ನ ತಮ್ಮನಿಗೆ ಸಂಬಂಧಿಸಿದ ದಾಖಲೆಗಳ ಮಾಹಿತಿ ಕೇಳಿದ್ದಾರೆ.

ಈ ದಾಖಲೆಗಳನ್ನು ಸಲ್ಲಿಸಲು ಮೂರು ದಿನ ಕಾಲಾವಕಾಶ ನೀಡಿದ್ದಾರೆ. ಸಲ್ಲಿಸಲು ಹೇಳಿರುವ ದಾಖಲೆಗಳನ್ನು ಇಮೇಲ್‌ ಮುಖಾಂತರ ಕಳಿಸುತ್ತೇನೆ. ಸದ್ಯಕ್ಕೆ ಯಾವ ಯಾವ ದಾಖಲೆಗಳನ್ನು ಕೇಳಿದ್ದಾರೆ ಅಂತ ಹೇಳಲಾರೆ. ಇಂದು ಆದಾಯದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು, ತೋರಿಸ್ತೇನೆ' ಎಂದು ವಿಚಾರಣೆಯ ಬಗ್ಗೆ ಮಾಹಿತಿ ನೀಡಿದರು.

ಈ ಹಿಂದೆ ಡಿಕೆಶಿ ತಮ್ಮ ಟ್ವಿಟರ್​ ಖಾತೆಯಲ್ಲಿ 'ನಾನು ಬಿಜೆಪಿ ಸೇರುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ' ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವರದಿಗಾರರು 'ಬಿಜೆಪಿಗೆ ಸೇರಲು ನಿಮಗೆ ಒತ್ತಡವಿದೆಯಾ?' ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ 'ಆ ವಿಚಾರದ ಬಗ್ಗೆ ಮಾತನಾಡಲು ಹೋದ್ರೆ ನನಗೆ ತಲೆ ಸುತ್ತುತ್ತದೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ಈಗ ಆ ವಿಚಾರ ಬಹಿರಂಗಗೊಳಿಸುವುದು ಸರಿಯಲ್ಲ. ನಾವು ಪರಿಸ್ಥಿತಿಯನ್ನು ಫೇಸ್ ಮಾಡಬೇಕು, ಫೇಸ್ ಮಾಡೋಣ' ಎಂದು ಡಿಕೆ. ಶಿವಕುಮಾರ್ ಹೇಳಿದರು.