ಎಸ್‍ಪಿ ನಾಯಕನ ಪುತ್ರಿ ಜೊತೆ ಪರಾರಿಯಾದ ಬಿಜೆಪಿ ನಾಯಕ
ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ಮದುವೆಯಾಗಿ 2 ಮಕ್ಕಳಿದ್ದ ಬಿಜೆಪಿ ನಾಯಕ ಸಮಾಜವಾದಿ ಪಕ್ಷದ ನಾಯಕನ 26 ವರ್ಷದ ಪುತ್ರಿಯೊಂದಿಗೆ ಓಡಿಹೋದ ಘಟನೆ ನಡೆದಿದೆ. 47 ವರ್ಷದ ಆಶೀಷ್ ಶುಕ್ಲಾಗೆ ಮದುವೆಯಾಗಿ 2 ಮಕ್ಕಳಿದ್ದಾರೆ. ಎಸ್‍ಪಿ ಪಕ್ಷದ ನಾಯಕನ ಪುತ್ರಿಗೆ ಶುಕ್ಲಾ ಜತೆಗೆ ಪ್ರೀತಿಯಿದ್ದು, ಮನೆಯಲ್ಲಿ ಒಪ್ಪದೆ ಬೇರೆ ಹುಡುಗನೊಂದಿಗೆ ವಿವಾಹ ನಿಶ್ಚಯಿಸಿದ್ದ ಕಾರಣ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ. ಶುಕ್ಲಾ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಲಾಗಿದೆ.