ಜೋಶಿಮಠದ ಬದರಿನಾಥ್ ಹೆದ್ದಾರಿ, ಮನೆಗಳಲ್ಲಿ ಬಿರುಕು; ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

ಚಮೋಲಿ (ಉತ್ತರಾಖಂಡ): ಜೋಶಿಮಠದ ಬಳಿ ಬದರಿನಾಥ ಹೆದ್ದಾರಿಯ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬದರಿನಾಥ ಹೆದ್ದಾರಿಯಲ್ಲಿ ಜೆಪಿಯಿಂದ ಮಾರ್ವಾಡಿವರೆಗಿನ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಚಮೋಲಿ ಡಿಎಂ ಹಿಮಾಂಶು ಖುರಾನಾ ತಿಳಿಸಿದ್ದಾರೆ.
'ಬಿರುಕುಗಳನ್ನು ಪರೀಕ್ಷಿಸಲು ಮತ್ತು ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಗೆ ಸೂಚನೆಗಳನ್ನು ನೀಡಲಾಗಿದೆ' ಎಂದು ಖುರಾನಾ ತಿಳಿಸಿದ್ದಾರೆ.
ಇನ್ನೂ, ಇಲ್ಲಿನ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ಬಗ್ಗೆ ಅಲ್ಲಿನ ಜನರು ದೂರು ನೀಡಿದ್ದಾರೆ. ಹಾಗಾಗಿ, ಜೋಶಿಮಠದಲ್ಲಿ ನಿಯೋಜಿಸಲಾದ ಇಂಜಿನಿಯರ್‌ಗಳ ತಂಡವನ್ನು ಮನೆಗಳ ಮೇಲಿನ ಬಿರುಕುಗಳನ್ನು ಪರೀಕ್ಷಿಸಲು ಕಳುಹಿಸಲಾಗಿದೆ. ಇದರಿಂದ, ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಬಹುದು' ಎಂದು ಅವರು ಹೇಳಿದರು.
ಜೋಶಿಮಠದ ಹಲವಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ಬೆನ್ನಲ್ಲೇ, ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.