"ನನ್ನ ಹಳೆ ನಂಬರಿನ್ನೂ ಚಾಲ್ತಿಯಲ್ಲಿದೆ, ಕೋವಿಡ್ ಸಹಾಯಕ್ಕಾಗಿ ಕರೆ ಮಾಡ್ಬೋದು" ; ನಟ ಸೋನು ಸೂದ್

"ನನ್ನ ಹಳೆ ನಂಬರಿನ್ನೂ ಚಾಲ್ತಿಯಲ್ಲಿದೆ, ಕೋವಿಡ್ ಸಹಾಯಕ್ಕಾಗಿ ಕರೆ ಮಾಡ್ಬೋದು" ; ನಟ ಸೋನು ಸೂದ್

ವದೆಹಲಿ : ವಿಶ್ವದ ಕೆಲವು ದೇಶಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ನಮ್ಮ ದೇಶದಲ್ಲೂ ಕೋವಿಡ್ ಹರಡುವ ಆತಂಕವನ್ನ ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಬಾಲಿವುಡ್ ನಟ ಸೋನುಸೂದ್ ಹೇಳಿಕೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.ಅವರ ಹಳೆಯ ಸಂಖ್ಯೆ ಇನ್ನೂ ಕಾರ್ಯನಿರ್ವಹಿಸುತ್ತಿದೆ ಮತ್ತು ಕೋವಿಡ್ ಸಹಾಯಕ್ಕಾಗಿ ಅವರನ್ನ ಸಂಪರ್ಕಿಸಬಹುದು ಎಂದು ಹೇಳಿದ್ದು, ಸಹಾಯ ಮಾಡಲು ಸಿದ್ಧ ಎಂದು ಖಚಿತ ಪಡಿಸಿದ್ದಾರೆ.

ಸೋನುಸೂದ್ ಅವರು ತಮ್ಮ ಪತ್ನಿ ಸೋನಾಲಿ ಸೂದ್ ಅವರೊಂದಿಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ಶುಕ್ರವಾರ ರಾಜಸ್ಥಾನದ ಇಂದೋರ್ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಮಾಧ್ಯಮ ಪ್ರತಿನಿಧಿಗಳು ಸುತ್ತುವರಿದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟ, ಇಂದೋರ್ ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಏತನ್ಮಧ್ಯೆ, ಅವರು ಹೊಸ ಕೊರೊನಾ ರೂಪಾಂತರದ ಬಗ್ಗೆ ಜಾಗರೂಕರಾಗಿರಿ ಎಂದು ಜನರಿಗೆ ಮನವಿ ಮಾಡಿದರು.

ಇನ್ನು ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಹಳೆಯ ಫೋನ್ ನಂಬರ್ ಇನ್ನೂ ಸಕ್ರಿಯವಾಗಿದೆ. ಜನರಿಗೆ ಯಾವುದೇ ಸಹಾಯ ಬೇಕಾದ್ರೂ ಅವರ ತಂಡವನ್ನ ಸಂಪರ್ಕಿಸಬೇಕು. ನನ್ನ ನಂಬರ್ ಕೂಡ ಈಗಲೂ ಹಾಗೆ ಚಾಲ್ತಿಯಲ್ಲಿದೆ. ಅಗತ್ಯವಿದ್ದಾಗ ಕರೆ ಮಾಡಿ' ಹೇಳಿದರು.