ಆಭರಣ ಪ್ರಿಯರಿಗೆ ಕಹಿ ಸುದ್ದಿ! ಇಂದಿನ ಚಿನ್ನದ ಬೆಲೆ ನೋಡಿದ್ರೆ ಶಾಕ್ ಆಗ್ತೀರಾ!

ಒಂದೇ ನಾಣ್ಯದ ಎರಡು ಮುಖಗಳಂತೆ ಚಿನ್ನ-ಬೆಳ್ಳಿ, ಆಭರಣ ಮತ್ತು ಉಳಿತಾಯವಾಗಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ನಮ್ಮ ದೇಶದಲ್ಲಿ ಚಿನ್ನದ ಮೇಲೆ ಹೆಂಗಳೆಯರಿಂದ ಹಿಡಿದು ಎಲ್ಲರಿಗೂ ಮೋಹ. ಆಭರಣವಾಗಿ, ಫ್ಯಾಷನ್‌ಆಗಿ ಈ ಹಳದಿ ಲೋಹ ಬಳಕೆಯಾದರೆ, ಇತ್ತ ಉಳಿತಾಯವಾಗಿಯೂ ಮತ್ತು ಹೂಡಿಕೆಯಾಗಿಯೂ ಬಂಗಾರದ ಮೇಲೆ ಜನ ಅವಲಂಬಿತರಾಗಿದ್ದಾರೆ.
ಚಿನ್ನದ ಮೇಲಿನ ಹೂಡಿಕೆ ಈಗ ಹೆಚ್ಚುತ್ತಲೇ ಇದೆ. ದೇಶದ ಆರ್ಥಿಕ ಸದೃಢತೆಯೂ ಅದು ತಾನು ಹೊಂದಿರುವ ಚಿನ್ನದ ಪ್ರಮಾಣದ ಮೇಲೆ ಅವಲಂಬಿತವಾಗಿದೆ ಹಾಗೂ ಚಿನ್ನ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಸ್ವೀಕರಿಸಲ್ಪಡುತ್ತದೆ. ಈ ಎಲ್ಲ ಅಂಶಗಳಿಂದಾಗಿ ಚಿನ್ನಕ್ಕೆ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ.
Online Marketing: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?
ಬಂಗಾರಕ್ಕೆ ಪ್ರಾಚೀನ ಕಾಲದಿಂದಲೂ ಹೆಚ್ಚಿನ ಮೌಲ್ಯವಿದೆ. ಅದರಲ್ಲೂ ಇತ್ತೀಚೆಗೆ ಬಂಗಾರದ ಮೌಲ್ಯ ಯಾರೂ ಊಹಿಸದ ಹಂತಕ್ಕೆ ಹೋಗಿದೆ. ಅಯ್ಯೋ ನಾವು ಆಗ್ಲೇ ಅಲ್ಪ-ಸ್ವಲ್ಪ ಬಂಗಾರ ಮಾಡಿಟ್ಟುಕೊಂಡ್ಡಿದ್ದೇ ಒಳ್ಳೆದಾಯ್ತು, ಈಗ ನಮ್ಮ ಬಂಗಾರಕ್ಕೆ ಹೆಚ್ಚು ಬೆಲೆ ಬಂದಿದೆ ಅನ್ನೋ ಹಿರಿಯರ ಮಾತನ್ನು ಕೇಳಿರಬಹುದು. ಹೀಗೆ ವರ್ಷಗಳಿಂದ ವರ್ಷಕ್ಕೆ ಸಾಗಿದಂತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ ಎನ್ನಬಹುದು.
ಎಷ್ಟಿದೆ ಇಂದು ಬಂಗಾರದ ರೇಟ್?
ಅಂದಹಾಗೆ ಚಿನ್ನ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಇಂದು ಸಾಕಷ್ಟು ಏರಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆಯನ್ನು ನೋಡುವುದಾದರೆ. ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ 5,530 ರೂ ಆಗಿದೆ.
ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರವಿವರ
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 55,350 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 55,600, ರೂ. 55,300, ರೂ. 55,300 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 55,450 ರೂ. ಆಗಿದೆ.
ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀರೋಣ.
ಒಂದು ಗ್ರಾಂ (1GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,530
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,032
ಎಂಟು ಗ್ರಾಂ (8GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 44,240
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 48,256
ಹತ್ತು ಗ್ರಾಂ (10GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 55,300
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 60,320
ನೂರು ಗ್ರಾಂ (100GM)
22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,53,000
24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,03,200
Petrol-Diesel Price Today: ಉತ್ತರ ಕನ್ನಡದಲ್ಲಿ ಪೆಟ್ರೋಲ್‌ಗೆ ₹1 ಏರಿಕೆ! ನಿಮ್ಮೂರಿನಲ್ಲಿ ಇಂದು ತೈಲ ಬೆಲೆ ಎಷ್ಟಿದೆ ಇಲ್ಲಿ ನೋಡಿ
ಬೆಳ್ಳಿ ದರ
ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಜಾಸ್ತಿಯೇ ಏರಿಕೆಯಾಗಿದ್ದರೆ ಇತ್ತ ಬೆಳ್ಳಿಯ ಬೆಲೆಯಲ್ಲೂ ಇಂದು ಅಲ್ಪ ಏರಿಕೆಯಾಗಿದೆ. ಬೆಳ್ಳಿ ಕೂಡ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಇಂದು ಮಹತ್ವದ ಏರಿಕೆ ಕಂಡಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆ 72,100 ರೂ. ಆಗಿದೆ.
ಬೆಳ್ಳಿ ಚಿನ್ನದಷ್ಟು ದುಬಾರಿಯಲ್ಲ ಹೌದು, ಆದರೆ ಬೆಳ್ಳಿಯೂ ತನ್ನದೆ ಆದ ಆಕರ್ಷಣೆ ಹೊಂದಿದ್ದು ಬೆಳ್ಳಿ ಆಭರಣಗಳಿಗೂ ಸಾಕಷ್ಟು ಬೇಡಿಕೆಯಿದೆ. ಭಾರತದಲ್ಲಿ ಬೆಳ್ಳಿಯೂ ಸಹ ಹೆಚ್ಚಾಗಿ ಖರೀದಿಸಲ್ಪಡುವ ವಸ್ತುವಾಗಿದೆ.
ವಿಶೇಷವಾಗಿ ಭಾರತದಲ್ಲಿ ಬೆಳ್ಳಿಯಿಂದ ತಯಾರಿಸಲಾದ ದೇವರ ವಿಗ್ರಹಗಳು ಹಾಗೂ ಹಲವು ಬಗೆಯ ಪೂಜಾ ಪರಿಕರಗಳಿಗೆ ಸಾಕಷ್ಟು ಬೇಡಿಕೆಯಿದೆ. ಬೆಳ್ಳಿ ತನ್ನ ವೈಜ್ಞಾನಿಕ ಗುಣಲಕ್ಷಣಗಳಿಗೂ ಹೆಚ್ಚು ಗುರುತಿಸಲ್ಪಡುತ್ತದೆ. ಅಂತೆಯೇ ಬೆಳ್ಳಿಯನ್ನು ಹಲವು ಕೈಗಾರಿಕಾ ಕ್ಷೇತ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರಗಳು
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 744, ರೂ. 7,440 ಹಾಗೂ ರೂ. 74,400 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,400 ಆಗಿದ್ದರೆ, ದೆಹಲಿಯಲ್ಲಿ ರೂ. 72,100, ಮುಂಬೈನಲ್ಲಿ ರೂ. 72,100 ಹಾಗೂ ಕೊಲ್ಕತ್ತದಲ್ಲೂ ರೂ. 71,100 ಗಳಾಗಿದೆ.
ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.