ಸುಟ್ಟು ಕರಕಲಾದ ಸೋಯಾಬಿನ್, ರೈತನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಲಕ್ಷಾಂತರ ರೂಪಾಯಿ ಮೌಲ್ಯದ ಸೋಯಾಬಿನ್ ಬೆಂಕಿಗೆ ಸುಟ್ಟು ಕರಕಲಾದ ಘಟನೆ ಧಾರವಾಡ ತಾಲೂಕಿನ ಲೋಕೂರ ಗ್ರಾಮದಲ್ಲಿ ನಡೆದಿದೆ. ಕಟಾವು ಮಾಡಿ ಒಂದು ಕಡೆಗೆ ಇಟ್ಟಿದ್ದ ಸೋಯಾಬೀನ್ ಗುಂಪಿಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ. ಇನ್ನೇನು ಮಶೀನ್ ಗೆ ಹಾಕಬೇಕು ಎನ್ನುವಾಗಲೇ ಬೆಂಕಿಗೆ ಆಹುತಿ ಆಗಿದೆ. ಹದಿನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬಿನ್, 200 ಕ್ಕೂ ಹೆಚ್ಚು ಚೀಲಗಳು ಸಂಪೂರ್ಣವಾಗಿ ಬೆಂಕಿಗೆ ತಡರಾತ್ರಿ ಹತ್ತಿಕೊಂಡ ಬೆಂಕಿಗೆ ಆಹುತಿ ಆಗಿದೆ. ಲೋಕುರ ಗ್ರಾಮದ ನೇಮಿನಾಥ ಜಲ್ಲಿ ಎಂಬ ರೈತರಿಗೆ ಸೇರಿದ ಜಮೀನಿನಲ್ಲಿ ಇಡಲಾಗಿದ್ದ ಸೋಯಾಬೀನ್ ಫಸಲು ಬೆಂಕಿಗೆ ಸುಟ್ಟು ಕರಕಲಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತ ಕೈಗೆ ಸಿಗಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಆಗಿದೆ ಈ ರೈತನ ಪರಸ್ಥಿತಿ ಆಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗರಗ ಪೊಲೀಸರಿಂದ ಪರಿಶೀಲನೆ ನಡಸಿ, ಬೆಂಕಿಗೆ ಕಾರಣವನ್ನು ಏನೆಂದು ಪೊಲೀಸರ ತನಿಖೆ ನಡೆಸಿದ್ದಾರೆ.