ನಾಳೆ ಚುನಾವಣೆ ಹಿನ್ನೆಲೆ ಮತದಾನ ಕೇಂದ್ರಗಳಿಗೆ ಬಿಗಿ ಬಂದುಬಸ್ತ್ ಜಿಲ್ಲಾಧಿಕಾರಿ.... | Dharwad |
ಸೆಪ್ಟೆಂಬರ್,3 ರಂದು ನಡೆಯುವ ಮಹಾನಗರ ಪಾಲಿಕೆ ಚುಣಾವಣೆ ಹಿನ್ನೆಲೆಯಲ್ಲಿ ಮೂರು ಕಡೆ ಮಸ್ಟರಿಂಗ್ ಕೇಂದ್ರವನ್ನ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಹೇಳಿದರು. ಧಾರವಾಡದ ಬಾಶೆಲ್ ಮಿಶನ್ ಶಾಲೆಯಲ್ಲಿ 25 ವಾರ್ಡಗಳಲ್ಲಿ ಮಸ್ಟರಿಂಗ ಕೇಂದ್ರಕ್ಕೆ ಬೇಟೆ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹಾನಗರ ಪಾಲಿಕೆ ಚುನಾವಣೆ ಮತದಾನ ನಾಳೆ ನಡೆಯುವ ಹಿನ್ನೆಲೆ ನಾಳೆ 82 ವಾರ್ಡಗಳಿಗೆ ಮತದಾನ ನಡೆಯಲಿದೆ, 175 ಸರಕಾರ ಬಸ್ ಗಳನ್ನ ತೆಗೆದುಕೊಂಡಿದೆ, ನಾವೂ ಕೋವಿಡ್ ನಿಯಮದಡಿಯಲ್ಲಿ ಸಿಬ್ಬಂದಿಗಳನ್ನ ಕಳಿಸಿಕೊಡಲಾಗುತ್ತಿದೆ, ಹೈಪರ್ ಸೆನ್ ಸಿಟಿವ್ 108 ಮತಗಟ್ಟೆಗಳಿವೆ, 842 ಮತಗಟ್ಟೆಗಳನ್ನ ಗುರುತಿಸಲಾಗಿದೆ, ಅಲ್ಲದೆ ನಾಳೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಮಾಡಲಿಕ್ಕೆ ಅವಕಾಶ ಇರುತ್ತದೆ. ಕೋವಿಡ್ ನಿಯಮಾವಳಿಗಳನ್ನ ಪಾಲನೆ ಮಾಡುವಂತೆ ಸಿಬ್ಬಂದಿಗಳಿಗೆ ಹೇಳಲಾಗಿದೆ ಎಂದರು...