ಮಂತ್ರಾಲಯ ಹುಂಡಿಯಲ್ಲಿ ಹಣದ ಹೊಳೆ: 30 ದಿನದಲ್ಲಿ 3.21 ಕೋಟಿ ಸಂಗ್ರಹ!
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ವೇಳೆ ಮಾತ್ರ ಒಂದು ಕೋಟಿ ರೂ. ದಾಟುತ್ತಿದ್ದ ಮಂತ್ರಾಲಯ ಮಠದ ಆದಾಯ ಈಗ ತಿಂಗಳಿನಿಂದ ತಿಂಗಳಿಗೆ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ.
ಪ್ರತಿ ತಿಂಗಳೂ ಕಾಣಿಕೆ ಸಲ್ಲಿಕೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ಭೇಟಿ ನೀಡುವವರ ಸಂಖ್ಯೆಯೂ ಏರುಮುಖವಾಗುತ್ತಿದ್ದು ಶ್ರೀಮಠದ ಆಡಳಿತಕ್ಕೆ ಭಾರಿ ಆದಾಯ ತರುತ್ತಿದೆ.
ತಿರುಪತಿಯಂತೆಯೇ ಮಂತ್ರಾಲಯಕ್ಕೂ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲೂ ಕೋವಿಡ್ ನಂತರದಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದೇ ಹೇಳಲಾಗುತ್ತಿದೆ.
ಕಳೆದ 2022ರಲ್ಲಿ ನಡೆದ ರಾಯರ ಆರಾಧನೆ ವೇಳೆ ಒಟ್ಟು 2.78 ಕೋಟಿ ರೂ. ಹುಂಡಿಯಲ್ಲಿಕಾಣಿಕೆ ಸಂದಾಯವಾಗಿತ್ತು. ಇದು ಅದುವರೆಗಿನ ಅತೀ ಹೆಚ್ಚಿನ ಮೊತ್ತವಾಗಿತ್ತು. ಆದರೆ ಈಗ ಹುಂಡಿಯ ಕಾಣಿಕೆಯ ಮೊತ್ತವು 3.21 ಕೋಟಿ ರೂ.ಗೆ ತಲುಪಿದೆ. ಈ ಮೂಲಕ ದಾಖಲೆಯಾಗುತ್ತಲೇ ಸಾಗಿದೆ.