ದುರುಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ: ಚಾಲಕ ಮುತ್ತಪ್ಪ

ಬೆಂಗಳೂರು: ಬೆಂಗಳೂರಿನಲ್ಲಿ ಅಮಾನವೀಯ ಘಟನೆ ವರದಿಯಾಗಿದ್ದು, ರಸ್ತೆಯಲ್ಲಿ ವ್ಯಕ್ತಿಯನ್ನು ಬೈಕ್ ಸವಾರ 1 ಕಿ.ಮೀ ಧರಧರನೇ ಎಳೆದೊಯ್ದ ಭೀಕರ ಘಟನೆ ಪ್ರಕರಣಕ್ಕೆ ಸಂಬಂಧಿಸಿ, ಚಾಲಕ ಮುತ್ತಪ್ಪ ಪ್ರತಿಕ್ರಿಯೆ ನೀಡಿದ್ದಾರೆ.ದುರುಹಂಕಾರಕ್ಕೆ ನಾನು ಅವನ ಹಿಂದೆ ಹೋಗಿದ್ದೆ ಎಂದು ಬೈಕಿನ ಹಿಂದೆ ನೇತುಬಿದ್ದ ಚಾಲಕ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲತಃ ಬಿಜಾಪುರನಾಗಿದ್ದು, ಆದರೆ 54 ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ಕುವೆಂಪು ಪ್ರಾಶಾಭಾರತಿಗೆ ಹೋಗುತ್ತಿದ್ದೆ. ಈ ವೇಳೆ ಈ ಘಟನೆ ನಡೆದಿದೆ. ಬೈಕ್ ಸವಾರ ಸಾಹಿಲ್ ಹಿಂಬದಿಯಿಂದ ಬಂದು ನನ್ನ ಬುಲೆರೋ ಗಾಡಿಗೆ ಗುದ್ದಿದ್ದಾನೆ.