ಕನಿಷ್ಠಕ್ಕೆ ತಲುಪಿದ ದೆಹಲಿ ವಾಯು ಗುಣಮಟ್ಟ

ಕನಿಷ್ಠಕ್ಕೆ ತಲುಪಿದ ದೆಹಲಿ ವಾಯು ಗುಣಮಟ್ಟ

ವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ವಾಯು ಗುಣಮಟ್ಟ ಪ್ರಮಾಣ ಸೂಚ್ಯಂಕ 265ರಷ್ಟಿತ್ತು. ಸೋಮವಾರದಿಂದ ದೀಪಾವಳಿ ಹಬ್ಬವಿರುವುದರಿಂದಾಗಿ ಈ ಸೂಚ್ಯಂಕ ಇನ್ನಷ್ಟು ಕುಸಿದು, ಗುಣಮಟ್ಟ ಹದಗೆಡುವ ಸಾಧ್ಯತೆಯಿದೆ.

ಕಳೆದ ವರ್ಷ ದೀಪಾವಳಿ ಹಿಂದಿನ ದಿನದಂದು(ನ.3) ನಗರದಲ್ಲಿ ವಾಯು ಗುಣಮಟ್ಟದ ಸೂಚ್ಯಂಕ 314 ಇತ್ತು.

ಅದು ಹಬ್ಬದ ದಿನದಂದು 382ಕ್ಕೆ ಹಾಗೂ ಅದರ ನಂತರದ ದಿನದಂದು 414ಕ್ಕೆ ಕುಸಿದಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ವಾಯು ಗುಣಮಟ್ಟ ಸೂಚ್ಯಂಕ 50ರ ಒಳಗಿದ್ದರೆ ಉತ್ತಮವೆಂದು ಹಾಗೂ 200ರ ಮೇಲಿದ್ದರೆ ಅಪಾಯಕಾರಿ ಎಂದು ಪರಿಗಣಿಸಲಾಗುವುದು.