ಶಿವಣ್ಣ-ಗಣಿಗೆ 'ಪಡೆಯಪ್ಪ' ನಿರ್ದೇಶಕ ಕೆಎಸ್ ರವಿಕುಮಾರ್ ಆಕ್ಷನ್ ಕಟ್: ಫೋಟೊ ವೈರಲ್

ಶಿವಣ್ಣ-ಗಣಿಗೆ 'ಪಡೆಯಪ್ಪ' ನಿರ್ದೇಶಕ ಕೆಎಸ್ ರವಿಕುಮಾರ್ ಆಕ್ಷನ್ ಕಟ್: ಫೋಟೊ ವೈರಲ್

'ಕೋಟಿಗೊಬ್ಬ 3' ಸಿನಿಮಾ ಬಳಿಕ ಸೂರಪ್ಪ ಬಾಬು ಮತ್ತಷ್ಟು ಅಗ್ರೆಸಿವ್ ಆಗಿದ್ದಾರೆ. ಈ ಬಾರಿ ಗೆಲ್ಲಲೇ ಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಅದಕ್ಕೆ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ್ದಾರೆ. ಈ ಕಾಂಬಿನೇಷನ್ ನೋಡಿದ್ರೆ, ಸಿನಿಮಾ ಹಲ್‌ಚಲ್ ಎಬ್ಬಿಸೋದು ಪಕ್ಕಾ ಅನ್ನೋದು ಗೊತ್ತಾಗುತ್ತೆ.

ನಿರ್ಮಾಪಕ ಸೂಪರಪ್ಪ ಬಾಬು ಹೊಸ ಸಿನಿಮಾದ ಬಗ್ಗೆ ಕೆಲವು ದಿನಗಳಿಂದ ಸುದ್ದಿ ಓಡಾಡುತ್ತಲೇ ಇತ್ತು. ಮಲ್ಟಿಸ್ಟಾರರ್ ಸಿನಿಮಾ ನಿರ್ಮಾಣ ಮಾಡೋಕೆ ಮುಂದಾಗಿದ್ದಾರೆ. ಶಿವಣ್ಣ ಹಾಗೂ ಗಣೇಶ್ ಇಬ್ಬರೂ ಒಪ್ಪಿದ್ದಾರಂತೆ ಅನ್ನೋ ಸುದ್ದಿಯೀಗ ಪಕ್ಕಾ ಆಗಿದೆ.

ತಮಿಳಿನ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇವರು ಶಿವರಾಜ್‌ಕುಮಾರ್‌ ಹಾಗೂ ಗಣೇಶ್‌ ಜೊತೆಯಾಗಿ ನಟಿಸುತ್ತಿರುವ ಸಿನಿಮಾಗೆ ಆಕ್ಷನ್ ಕಟ್ ಹೇಳುವುದು ಕನ್ಫರ್ಮ್ ಆಗಿದೆ. ಅದಕ್ಕೆ ಸಾಕ್ಷಿನೇ ಈ ವೈರಲ್ ಫೋಟೊ.

ಇತ್ತೀಚೆಗಷ್ಟೇ ನಾಲ್ಕು ಮಂದಿ ದಿಗ್ಗಜರು ಒಟ್ಟಿಗೆ ಸೇರಿಗೆ ಮಲ್ಟಿಸ್ಟಾರರ್ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ಬಳಿಕ ಈ ಮಲ್ಟಿಸ್ಟಾರರ್ ಸಿನಿಮಾ ಟೇಕ್ ಆಫ್ ಮಾಡುವುದಕ್ಕೆ ನಾಲ್ಕೂ ಮಂದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಕೆ ಎಸ್‌ ರವಿಕುಮಾರ್ ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ರವಿಕುಮಾರ್ ಕಾಂಬಿನೇಷನ್‌ನಲ್ಲಿ ಹಲವು ಸೂಪರ್‌ ಹಿಟ್ ಸಿನಿಮಾಗಳು ಬಂದಿವೆ. 'ಮುತ್ತು', 'ಪಡೆಯಪ್ಪ','ಲಿಂಗ'ದಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಕನ್ನಡದಲ್ಲಿಯೂ ಒಂದು ಸಿನಿಮಾಗೆ ಆಕ್ಷನ್ ಹೇಳಿದ್ದರು. 2016ರಲ್ಲಿ ತೆರೆಕಂಡಿದ್ದ ಸೂಪರಪ್ಪ ಬಾಬು ನಿರ್ಮಾಣ ಮಾಡಿದ್ದ 'ಕೋಟಿಗೊಬ್ಬ 2' ಸಿನಿಮಾವನ್ನು ನಿರ್ದೇಶಿಸಿದ್ದರು. 'ಕೋಟಿಗೊಬ್ಬ 2' ಜೊತೆಗೆ ತಮಿಳಿನಲ್ಲೂ ಏಕಕಾಲಕ್ಕೆ ಶೂಟಿಂಗ್ ಮಾಡಿದ್ದರು. ಈ ಸಿನಿಮಾ 'ಮುಡಿಂಜ ಇವನ ಪುಡಿ'ಯಾಗಿ ತೆರೆಕಂಡಿತ್ತು. ಈಗ ಮತ್ತೆ ಅದೇ ನಿರ್ಮಾಪಕರಿಗೆ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಒಪ್ಪಿದ್ದಾರೆ.

ಶಿವರಾಜ್‌ಕುಮಾರ್ ಇತ್ತೀಚೆಗೆ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬೈರಾಗಿ' ಸಿನಿಮಾ ಬಳಿಕ ಇತ್ತೀಚೆಗೆ ಅತಿಥಿ ಪಾತ್ರದಲ್ಲಿ ನಟಿಸಿದ್ರೂ, 'ಕಬ್ಜ' ಮಲ್ಟಿಸ್ಟಾರರ್ ಅಂತಾನೇ ಫೇಮಸ್ ಆಗಿದೆ. ಇನ್ನೊಂದು ತಮಿಳಿನಲ್ಲಿ ರಜನಿಕಾಂತ್ ಜೊತೆ 'ಜೈಲರ್' ಹಾಗೇ ಧನುಷ್ ಜೊತೆ 'ಕ್ಯಾಪ್ಟನ್ ಮಿಲ್ಲರ್'ಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಈಗ ಗಣೇಶ್ ಹಾಗೂ ಶಿವಣ್ಣ ಕಾಂಬಿನೇಷನ್ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ. ಈ ಅಪರೂಪದ ಕಾಂಬಿನೇಷನ್‌ಗಾಗಿ ಕೆ ಎಸ್ ರವಿಕುಮಾರ್ ವಿಶಿಷ್ಟವಾದ ಕಥೆಯೊಂದನ್ನು ಹೆಣೆದಿದ್ದು, ಜುಲೈನಲ್ಲಿ ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ.