ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ | Hubli |
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದೇಶಪಾಂಡೆನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು. ಅಧ್ಯಕ್ಷರಾಗಿ ಅನಂತರಾಜ ಭಟ್ ಎನ್., ಕಾರ್ಯದರ್ಶಿಯಾಗಿ ಶಿವಪ್ರಸಾದ ಪಿ. ಬೇಕಲ್, ಖಜಾಂಚಿಯಾಗಿ ಸಿ.ಎಫ್. ಕುಬಿಹಾಳ ಪದಗ್ರಹಣ ಮಾಡಿದರು. ಎಸ್‌ಡಿಎಂ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಅಂಗಾAಗ ದಾನ, ಹೆರಿಟೇಜ್ ಸ್ತ್ರೀ ಸಕ್ಷಮ್- ಕೌಟುಂಬಿಕ ದೌರ್ಜನ್ಯದ ವಿರುದ್ಧ ಧ್ವನಿ ಹಾಗೂ ಕಾನೂನಿನ ಮಾಹಿತಿ, ಹೆರಿಟೇಜ್ ಪರೀಕ್ಷಾ ಪರ್ವ-೧೦ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಕುರಿತು ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಐಪಿಡಿಜಿ ಸಂಗ್ರಾಮ ಪಾಟೀಲ, ನರೀಂದರ ಬರವಾಲ ಸುಧೀರ ಹಾರವಾಡ ಮಾತನಾಡಿದರು. ಸುಭಾಷಚಂದ್ರ ಹೊಲಳ್, ಸ್ವಾಗತಿಸಿದರು. ಕ್ಲಬಿನ ಕಾರ್ಯದರ್ಶಿ ಶಿವಪ್ರಸಾದ ಪಿ. ಬೆಕಲ್ ವಂದಿಸಿದರು.