ಮಕ್ಕಳಿಗೆ ಕಲರ್...ಕಲರ್.... ಬಲೂನ್, ಗುಲಾಬಿ ಹೂ ಹಾಗೂ ಚಾಕಲೇಟ್ ನೀಡಿ ಸ್ವಾಗತ ಕೋರಿದ ಶಿಕ್ಷಕರು
ಕೊರೋನಾ ಆತಂಕದಿಂದ ಕಳೆದ ಒಂದೂವರೆ ವರ್ಷದಿಂದ ಬಾಗಿಲು ಹಾಕಿದ್ದ ಪ್ರಾಥಮಿಕ ಶಾಲೆಗಳಿಗೆ ಇಂದಿನಿಂದ ಆರಂಭಗೊಂಡಿದ್ದು ಮಕ್ಕಳು ಉತ್ಸಾಹದಿಂದ ಶಾಲೆಗಳಿಗೆ ಬಂದಿದ್ದಾರೆ. ಪುಟ್ಟ-ಪುಟ್ಟ ಮಕ್ಕಳು ಬ್ಯಾಗ್ ಹಾಕಿಕೊಂಡು ಶಾಲೆಗಳಿಗೆ ಬರ್ತಿರೋದ ಕಂಡು ಶಿಕ್ಷಕ ವೃಂದ ಕೂಡ ಸಂತಸಪಟ್ಟಿದೆ. ಮಕ್ಕಳು ಶಾಲೆಗೆ ಬರುತ್ತಾರೆಂದು ಶಿಕ್ಷಕರು ಬೆಳಗ್ಗೆಯೇ ಶಾಲೆಗೆ ಬಂದು ಶಾಲೆಗೆ ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಶಾಲಾ ಶಿಕ್ಷಕರು ಮಕ್ಕಳಿಗೆ ಕಲರ್...ಕಲರ್.... ಬಲೂನ್, ಗುಲಾಬಿ ಹೂ ಹಾಗೂ ಚಾಕಲೇಟ್ ನೀಡಿ ಸ್ವಾಗತ ಕೋರಿದ್ದರು. ಇನ್ನು ಸರ್ಕಾರ ಶಾಲೆಗೆ 2 ಸಲ ಸ್ಯಾನಿಟೈಸ್ ಮಾಡಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ಮುಂಜಾಗೃತ ಕ್ರಮ ಕೈಗೊಂಡಿದ್ದಾರೆ. ಶಿಕ್ಷಕರು ಕೂಡ ಮಕ್ಕಳಿಗೆ ಧೈರ್ಯ ತುಂಬಿ, ಸ್ಯಾನಿಟೈಸರ್ ಹಾಕಿ ಭಯಪಡಬೇಡಿ ಎಂದು ಧೈರ್ಯ ತುಂಬಿ ಶಾಲೆಗೆ ಬರಮಾಡಿಕೊಂಡಿದ್ದಾರೆ.