ಬೈರತಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭೂಸ್ಪರ್ಶ -ಮುಗಿಬಿದ್ದ ಗ್ರಾಮಸ್ಥರು

ಬೆಂಗಳೂರನಿಂದ ಹುಬ್ಬಳ್ಳಿಗೆ ಹೆಬ್ಬಾಳದ ಶಾಸಕ ಬೈರತಿ ಸುರೇಶ ಅವರು ಪ್ರಯಾಣಿಸುತ್ತಿದ್ದ ಹೆಲಿಕ್ಯಾ ಪ್ಟರ್ ಹಾವೇರಿ ಜಿಲ್ಲಾ ಶಿಗ್ಗಾಂವಿ ಬಳಿ ಧಿಡೀರ ತುರ್ತು ಭೂಸ್ಪರ್ಶ ಮಾಡಿದ್ದರಿಂದಾಗಿ ಹೆಲಿಕ್ಯಾಪ್ಟರ್ ನೋಡಲು ಜನರು ಮುಗಿಬಿದ್ದ ಘಟನೆ ವರದಿಯಾಗಿದೆ. ಹವಾಮಾನದಲ್ಲಿನ ಬದಲಾವಣೆಯಿಂದ ಶಿಗ್ಗಾಂವಿ ತಾಲೂಕಿನ ಬಸನಾಳ ಗ್ರಾಮದ ಪ್ರೌಢ ಶಾಲೆಯ ಆವರಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಆಗ ವಿಷಯ ತಿಳಿದ ಸುತ್ತಮುತ್ತಲಿನ ಗ್ರಾಮಸ್ಥರು ಹೆಲಿಕ್ಯಾಪ್ಟರ್ ನೋಡಲು ಭಾರಿ ಪ್ರಮಾಣದಲ್ಲಿ ಸೇರಿದ್ದರು. ನಮ್ಮ ಊರಿಗೆ ಹೆಲಿಕಾಪ್ಟರ್ ಬಂದಿಳಿದಿದೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಂತೆ, ಅದನ್ನು ನೋಡಲು ತಂಡೋಪ ತಂಡಗಳಾಗಿ ಮುಗಿಬಿದ್ದರು. ಈ ವೇಳೆ ಹೆಲಿಕ್ಯಾಪ್ಟರ್ ನಲ್ಲಿ ಹೆಬ್ಬಾಳ ಶಾಸಕ ಬೈರತಿ ಸುರೇಶ ಅವರಿದ್ದುದನ್ನು ನೋಡಿ ಯೋಗಕ್ಷೇಮ ವಿಚಾರಿಸಿದರು.ಸೇರಿದ್ದ ಜನರು ಯಾವದೇ ತೊಂದರೆಯಾಗದಂತೆ ಗ್ರಾಮಸ್ಥರು ನೋಡಿಕೊಂಡರು. ಬಿಸಿಲು ಬಿದ್ದ ನಂತರ ಮತ್ತೆ ಹುಬ್ಬಳ್ಳಿ ಕಡೆಗೆ ಸಂಚಾರ ಮಾಡಲಾಯಿತು.ಹೆಲಿಕಾಪ್ಟರ್ ಭೂಸ್ಪರ್ಶವಾದ ತಕ್ಷಣ ಶಾಸಕ ಭೈರತಿ ಸುರೇಶ ವಿಚಲಿತರಾದಂತೆ ಕಂಡು ಬಂದರು. ನಾವು ಯಾವ ಗ್ರಾಮದಲ್ಲಿ ಬಂದು ಇಳಿದಿದ್ದೇವೆ ಎಂಬುದಾಗಿ ಜನರನ್ನು ವಿಚಾರಿಸಿದರು.ಈ ವೇಳೆ ಒಂದು ರೀತಿ ಭಯ ಅವರಲ್ಲಿ ಮೂಡಿತ್ತು. ನಂತರ ಹೆಲಕ್ಯಾಪ್ಟರ್ ನಲ್ಲಿದ್ದುದ್ದು ಎಂ.ಎಲ್.ಎ ಎಂದು ತಿಳಿದು ಅವರಿಗೆ ಹೂವಿನಹಾರ ಹಾಕಿ ಸನ್ಮಾನಿಸಿದರು. ನಂತರ ಶಾಸಕರಿಗೆ ಗ್ರಾಮಸ್ಥರು ಅವಶ್ಯಕ ಉಪಚಾರ ಸಹ ಮಾಡಿದರು.