ರಶ್ಮಿ ಮಹೇಶ್ ಸೇರಿ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಫೆಬ್ರವರಿ 12; ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮೊದಲೇಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡುತ್ತಿದೆ.
ಶನಿವಾರ ಕರ್ನಾಟಕ ಸರ್ಕಾರ ರಶ್ಮಿ ಮಹೇಶ್ ಸೇರಿದಂತೆ 13 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಚುನಾವಣಾ ದಿನಾಂಕ ಘೋಷಣೆಯಾದರೆ ಯಾವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಈಗಲೇ ವರ್ಗಾವಣೆ ಮಾಡಲಾಗುತ್ತಿದೆ.
ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ
* ರಶ್ಮಿ ವಿ ಮಹೇಶ್ (ಕೆಎನ್ 1996) ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವರ್ಗಾವಣೆ. ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ.
* ಡಾ. ರಮಣ ರೆಡ್ಡಿ ಇ. ವಿ. (ಕೆಎನ್ 1988) ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವರ್ಗಾವಣೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರ್ನಮೆಂಟ್ ಕಮ್ ಡೆವಲಪ್‌ಮೆಂಟ್ ಆಗಿ ನೇಮಕ. ಈ ಸ್ಥಾನದಿಂದ ಪ್ರಸಾದ್ ಐ ಎಸ್ ಎನ್ ಬಿಡುಗಡೆ.
* ಕಪಿಲ್ ಮೋಹನ್ (ಕೆಎನ್ 1990) ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ವರ್ಗಾವಣೆ. ಇಂಧನ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ. ಈ ಸ್ಥಾನದಲ್ಲಿದ್ದ ಕುಮಾರ್ ನಾಯಕ್ ಜಿ. ವರ್ಗಾವಣೆ.
* ಮುಂದಿನ ಆದೇಶದ ತನಕ ಕಪಿಲ್ ಮೋಹನ್‌ಗೆ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ, ಬೆಂಗಳೂರು ಹೆಚ್ಚುವರಿ ಜವಾಬ್ದಾರಿ.
* ಕುಮಾರ್ ನಾಯಕ್ ಜಿ. (ಕೆಎನ್ 1990) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆಯುಕ್ತರಾಗಿ ನೇಮಕ.
* ಉಮಾ ಶಂಕರ್ ಎಸ್. ಆರ್. (ಕೆಎನ್ 1993) ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರ್ನಮೆಂಟ್, ಕೋ-ಡಿಪಾರ್ಟ್‌ಮೆಂಟ್ ಹೆಚ್ಚುವರಿ ಹೊಣೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಇಲಾಖೆ.
* ಡಾ. ಸೆಲ್ವ ಕುಮಾರ್ ಎಸ್. (ಕೆಎನ್ 1997) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಲೋಕೋಪಯೋಗಿ ಇಲಾಖೆ, ಬೆಂಗಳೂರು ವರ್ಗಾವಣೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ. ಮುಂದಿನ ಆದೇಶದ ತನಕ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೆಚ್ಚುವರಿ ಹೊಣೆ
* ಮನೋಜ್ ಜೈನ್ (ಕೆಎನ್ 2006) ಸ್ಥಳ ನಿಯೋಜನೆಗಾಗಿ ಕಾದಿದ್ದರು. ಸರ್ಕಾರದ ಕಾರ್ಯದರ್ಶಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೇಮಕ. ಈ ಹುದ್ದೆಯಿಂದ ಮೇಜರ್ ಮಣಿವಣ್ಣನ್ ಪಿ. ಬಿಡುಗಡೆ.
* ಡಾ. ಶಿವಶಂಕರ್ ಎನ್. (ಕೆಎನ್ 2012) ಕಾರ್ಯಕಾರಿ ನಿರ್ದೇಶಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು ವರ್ಗಾವಣೆ. ವ್ಯವಸ್ಥಾಪಕ ನಿರ್ದೇಶಕರು ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ನಿಗಮ, ಬೆಂಗಳೂರು ನೇಮಕ.
* ನಳಿನಿ ಅತುಲ್ (ಕೆಎನ್ 2014) ಸ್ಥಳ ನಿಯೋಜನೆಗಾಗಿ ಕಾದಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ನೇಮಕ.
* ಮೊಹಮ್ಮದ್ ರೋಷನ್ (ಕೆಎನ್ 2015) ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ವರ್ಗಾವಣೆ. ವ್ಯವಸ್ಥಾಪಕರು ಹೆಸ್ಕಾಂ, ಹುಬ್ಬಳ್ಳಿ ನೇಮಕ. ಈ ಸ್ಥಾನದಲ್ಲಿದ್ದ ಭಾರತಿ ಡಿ. ವರ್ಗಾವಣೆ.
* ಬಯೋರ್ ಹರ್ಷಲ್ ನಾರಾಯಣರಾವ್ (ಕೆಎನ್ 2016) ಸ್ಥಳ ನಿಯೋಜನೆಗಾಗಿ ಕಾದಿದ್ದರು. ಜಿಲ್ಲಾ ಪಂಚಾಯಿತಿ ಬೆಳಗಾವಿ ಸಿಇಒ ಆಗಿ ನೇಮಕ. ಈ ಸ್ಥಾನದಲ್ಲಿದ್ದ ಹರ್ಷನ್ ಹೆಚ್. ವಿ. ವರ್ಗಾವಣೆ.
* ಬನ್ವರ್ ಸಿಂಗ್ ಮೀನಾ (ಕೆಎನ್ 2017) ಪರೀಕ್ಷಾ ನಿಯಂತ್ರಕರು, ಕೆಪಿಎಸ್‌ಸಿ, ಬೆಂಗಳೂರು ವರ್ಗಾವಣೆ. ಜನರಲ್ ಮ್ಯಾನೇಜರ್, ರಿ-ಸೆಟಲ್‌ಮೆಂಟ್ & ರಿ ಹ್ಯಾಬ್ಲಿಟೇಷನ್ ಮತ್ತು ಭೂ ಸ್ವಾಧೀನ ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ ನೇಮಕ.
* ಪ್ರಕಾಶ್ ಜಿ. ಟಿ. (ಕೆಎನ್ 2018) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಬೆಂಗಳೂರು ವರ್ಗಾವಣೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ವರ್ಗಾವಣೆ.