ಸಲ್ಲು ಅಭಿನಯದ 'ಅಂತಿಮ್' ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಸಲ್ಮಾನ್ ಖಾನ್ (Salman Khan) ಮತ್ತು ಅವರ ಭಾಮೈದ ಆಯುಷ್ ಶರ್ಮಾ (Ayush Sharma) ಮುಖ್ಯ ಪಾತ್ರದಲ್ಲಿ ನಟಿಸಿರುವ Antim: The Final Truth ಸಿನಿಮಾ, ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಇತ್ತೀಚಿನ ವರದಿಯ ಪ್ರಕಾರ, 'ಅಂತಿಮ್' ಬಿಡುಗಡೆಯಾದ ಮೊದಲ ದಿನ ರೂ 4.25-4.50 ಕೋಟಿ ಗಳಿಸಿದೆ. ಶನಿವಾರ (ನ.27) ಮತ್ತು ಭಾನುವಾರ (ನ.29) ವಾರಾಂತ್ಯದ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಬರುವ ನಿರೀಕ್ಷೆ ಇದೆ.
'ಅಂತಿಮ್' ಜಾನ್ ಅಬ್ರಹಾಂ (John Abraham) ಅಭಿನಯದ 'ಸತ್ಯಮೇವ್ ಜಯತೇ 2' ಚಿತ್ರದೊಂದಿಗೆ ಪೈಪೋಟಿ ನೀಡುತ್ತಿದೆ. ಮಹೇಶ್ ಮಂಜ್ರೇಕರ್ (Mahesh Manjrekar) ನಿರ್ದೇಶನದ, 'ಅಂತಿಮ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರ ಭಾಮೈದ ಆಯುಷ್ ಶರ್ಮಾ ಗೂಂಡಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದು ಮರಾಠಿಯ ಹಿಟ್ ಸಿನಿಮಾ 'ಮುಲ್ಶಿ ಪ್ಯಾಟರ್ನ್' ರಿಮೇಕ್ ಆಗಿದೆ.
ಚಿತ್ರದಲ್ಲಿನ ತಮ್ಮ ಪೊಲೀಸ್ ಪಾತ್ರದಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದಾರೆ. ಸಲ್ಮಾನ್ ಖಾನ್ ಈ ಸಿನಿಮಾದ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಅವರಿಗಿಂತಲೂ ಹೆಚ್ಚಾಗಿ ಆಯುಷ್ ಶರ್ಮಾ (Ayush Sharma) ಮಿಂಚಿದ್ದಾರೆ.