ಪಾಕಿಸ್ತಾನ ಯಾಕೆ? ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಲಿ.

ಬೆಂಗಳೂರು: ಇತ್ತೀಚೆಗೆ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಿ ಚುನಾವಣೆ ಗೆಲ್ಲಲಿ ಎಂಬ ಸಿಟಿ ರವಿ ಹೇಳಿಕೆ ನೀಡಿ ಕಿಡಿ ಹಚ್ಚಿದ್ದರು. ಈ ಬಗ್ಗೆ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ಕಿಡಿ ಕಾರಿದ್ದಾರೆ.
ಸಿದ್ಧರಾಮಯ್ಯ ಪರವಾಗಿ ಬ್ಯಾಟಿಂಗ್ ನಡೆಸಿದ ಸಚಿನ್ ಮೀಗಾ, 'ಚಿಕ್ಕಮಗಳೂರು ಕ್ಷೇತ್ರದಲ್ಲಿ ಸೋಲಿನ ಭಯದಿಂದ ಸಿ.ಟಿ.ರವಿ ಪಾಕಿಸ್ತಾನ ಹೆಸರು ಬಳಸಿ ಹೇಳಿಕೆ ನೀಡಿದ್ದಾರೆ.
'ಸಿ.ಟಿ ರವಿ ಒಂದು ಕೆಜಿ ಕುಂಕುಮ ಒಂದು ಮೀಟರ್ ಕೇಸರಿ ಬಟ್ಟೆಯಲ್ಲಿ ರಾಜಕೀಯ ಮಾಡಿ ಶಾಸಕ ಆಗಿದ್ದು. ಈಗ ಅವರು ಸಾವಿರಾರು ಕೋಟಿ ಒಡೆಯ. ಜಿಲ್ಲೆಯಲ್ಲಿ ರೈತರು ಎದಿರುಸುತ್ತಿರುವ ಸಮಸ್ಯೆಗೆ ಪರಿಹಾರ ನೀಡಿಲ್ಲ. ಈಗ ಪಾಕಿಸ್ತಾನ ನೆನಪಾಗುತ್ತದೆ' ಎಂದು ಮೀಗಾ ವಾಗ್ದಾಳಿ ನಡೆಸಿದ್ದಾರೆ.