ರಾಜ್ಯದ ಅತೀ ಬಡ ಜಿಲ್ಲೆ ಯಾದಗಿರಿ ಬಡತನ ಸೂಚ್ಯ0ಕ ವರದಿ |Dharwad|

ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯ0ಕ ವರದಿ ಶುಕ್ರವಾರ ಪ್ರಕಟ ಗೊಂಡಿದೆ. ಕರ್ನಾಟಕ ದಲ್ಲಿ ಯಾದಗಿರಿ ಜಿಲ್ಲೆ ಅತೀ ಹೆಚ್ಚು ಬಡವರನ್ನು ಹೊಂದಿರುವ ಜಿಲ್ಲೆ ಎಂಬ ಹಣೆಪಟ್ಟಿಗೆ ಭಾಜನವಾಗಿದೆ.ಹೈದರಾಬಾದ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ ಈಗಿನ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯಪುರ ಜಿಲ್ಲೆಗಳು ಅತೀ ಬಡತನ ಹೊಂದಿದ ಜಿಲ್ಲೆಗಳಾಗಿವೆ. ಇನ್ನೂ ಅತೀ ಶ್ರೀಮಂತ ಜಿಲ್ಲೆಗಳಲ್ಲಿ ಬೆಂಗಳೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಗಳು ಎಂದು ನೀತಿ ಆಯೋಗದ ಬಡತನ ಸೂಚ್ಯ0ಕ ವರದಿಯಲ್ಲಿ ಹೇಳಿಕೊಂಡಿದೆ.