ಕ್ಷಮತಾ ಸೇವಾ ಸಂಸ್ಥೆಯಿಂದ ಪೌರ ಕಾರ್ಮಿಕರಿಗೆ ಸನ್ಮಾನ.
ನಗರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಮಹಾತ್ಮಾ ಗಾಂಧೀಜಿ ಮತ್ತ ಲಾಲ್ ಬಹದ್ದೂರ ಶಾಸ್ತ್ರೀಯವರ ಜಯಂತಿ ಅಂಗವಾಗಿ ಪೌರ ಕಾರ್ಮಿಕರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸನ್ಮಾನ ಮಾಡಿ ಸಣ್ಣದಾದ ಉಡುಗೊರೆ ಕೊಟ್ಟು ಸಮಾರಂಭವನ್ನು ಶರಣು ಅಂಗಡಿ ನಡೆಸಿದರು. ನಂತರ ಮಾತನಾಡಿ, ನಮ್ಮ ದೇಶ, ನಮ್ಮ ನಾಡು, ನಮ್ಮ ಜನರು ಎಲ್ಲರೂ ಒಂದು. ಜಾತಿ ಬೇಧ ಮಾಡದೇ ಹೊಂದಾಣಿಕೆಯ ಜೀವನ ನಡೆಸಬೇಕಾದ ಸಂದರ್ಭದಲ್ಲಿ ನಾವು ಹೊಂದಿಕೊಂಡು ಜೀವನ ನಡೆಸಿ ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿದೆ. ನಮ್ಮನ್ನು ಬೇರೆ ಮಾಡಲು ಅನ್ಯ ದೇಶವು ಹೊಂಚು ಹಾಕುವಾಗ ನಾವು ಎಲ್ಲರೂ ದೇಶದ ಮಕ್ಕಳು, ಜಾತಿ ಭೇಧದ ಮಾತುಗಳನ್ನು ಯಾವುದೇ ಕಷ್ಟದ ಸಮಯದಲ್ಲೂ ಸಹ ಮಾತನಾಡದೇ ಹೊಂದಾಣಿಕೆ ಜೀವನ ಸಾಗಿಸಬೇಕಾಗಿದೆ. ಪೌರ ಕಾರ್ಮಿಕರು ನಿಜವಾದ ಸೇನಾನಿಗಳು, ನಮ್ಮ ನಗರವನ್ನು ಸ್ವಚ್ಚತೆಯಿಂದ ಇಟ್ಟಿದ್ದರ ಪರಿಣಾಮ ಧಾರವಾಡ ನಗರಕ್ಕೆ ಕೀರ್ತಿ ಬಂದಿದೆ. ಇನ್ನೂ ಸಾಕಷ್ಟು ಜನರು ಧಾರವಾಡಕ್ಕೆ ಬಂದು ನೆಲೆಸಲು ಸಜ್ಜಾಗಿದ್ದಾರೆ. ಪೌರ ಕಾರ್ಮಿಕರ ಕಾರ್ಯಕ್ಕೆ ನಮ್ಮ ಅನಂತ ಧನ್ಯವಾದಗಳನ್ನು ತಿಳಿಸಿದರು.