ಬೊಮ್ಮಾಯಿ ಅವರು ಪ್ರಧಾನಿ ಮೋದಿಯನ್ನು ಯಾಕೆ ಭೇಟಿ ಮಾಡಿದ್ರು ಎಚ್.ಕೆ ಪಾಟೀಲ್
ತರಾತುರಿಯಲ್ಲಿ ಬೊಮ್ಮಾಯಿ ಅವರು ಪ್ರಧಾನಿ ಮೋದಿಯನ್ನು ಯಾಕೆ ಭೇಟಿ ಮಾಡಿದ್ರು ಎಂದು ರಾಜ್ಯದ ಜನರಿಗೆ ಸ್ಪಷ್ಟ ಪಡಿಸಬೇಕು ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಗ್ರಹಿಸಿದರು.ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಜೀರಾಳ ಕಲ್ಗುಡಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಎಚ್.ಕೆ.ಪಾಟೀಲ್ ಮಾತನಾಡಿ ಬೊಮ್ಮಾಯಿ ಮೋದಿ ಭೇಟಿ ಆಗಿರೋದು ನೋಡಿದ್ರೆ ಬಿಜೆಪಿ ಯಲ್ಲಿ ಏನೋ ಗೊಂದಲ ಇದೆ ಅಂತಾ ಕಾಣಸತ್ತೆ ಇದರಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗಿರೋದು ಸ್ಪಷ್ಟವಾಗ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇನ್ನು ಎರಡು ಮೂರು ಗಂಟೆಯಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.ಬೊಮ್ಮಾಯಿ ಮೋದಿಯೊಂದಿಗೆ ಎನು ಮಾತಾಡಿದಾರೆ ಅನ್ನೋದು ಕರ್ನಾಟಕದ ಜನರಿಗೆ ಸ್ಪಷ್ಟ ಪಡಿಸಬೇಕು ಅನ್ಮೋದು ನನ್ನ ಆಗ್ರಹ ಎಂದರು. ಇನ್ನೂ ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ವಿಚಾರಕ್ಕೆ ಪ್ರತಿಕ್ರಿಯಿಸಿ ತನಿಖೆ ಮಾಡಲಿ ಯಾರ ಇದ್ದಾರೆ ಅನ್ನೋದು ಗೊತ್ತಾಗತ್ತೆ ಎಂದ ಎಚ್.ಕೆ ಪಾಟೀಲ್ ಮೆಲ್ಲನೆ ಜಾರಿಕೊಂಡರು.