ವೃದ್ಧೆಯೊಬ್ಬರು ಪುನೀತ್ ರಾಜಕುಮಾರ್ ಫೋಟೋಕ್ಕೆ ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವಿಡಿಯೋ ವೈರಲ್

ವೃದ್ದೆಯೊಬ್ಬರು ಬಸ್ ಮೇಲಿನ ಪುನೀತ್ ರಾಜಕುಮಾರ ಫೆÇೀಟೊಕ್ಕೆ ಮುತ್ತಿಟ್ಟು, ಸೆರಗಿನಿಂದ ಮುಖ ಸವರಿದ ವಿಡಿಯೋ ಭಾರಿ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಬಸ್ ನಿಲ್ದಾಣದಲ್ಲಿನ ಬಸ್ ಮೇಲಿನ ಜಾಹೀರಾತು ಒಂದರಲ್ಲಿ ಪುನೀತ್ ರಾಜಕುಮಾರ ಫೆÇೀಟೊ ಇದೆ. ಅಪ್ಪು ಭಾವಚಿತ್ರ ನೋಡಿ ಅಜ್ಜಿ ಭಾವುಕರಾಗಿ ಫೆÇೀಟೊಕ್ಕೆ ತಲೆ ಇಟ್ಟು ಮುತ್ತಿಟ್ಟಿದ್ದಾರೆ. ಅμÉ್ಟೀ ಅಲ್ಲದೇ ಅಪ್ಪು ಭಾವಚಿತ್ರದ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಸ್ವಚ್ಚಗೊಳಿಸಿದ್ದು, ಈ ದೃಶ್ಯವನ್ನು ಸ್ಥಳೀಯರು ದೂರದಿಂದ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಜ್ಜಿ ನೊಂದುಕೊಂಡು ಫೆÇೀಟೊವನ್ನು ಸೆರಗಿನಿಂದ ಸ್ವಚ್ಚ ಮಾಡಿದ ದೃಶ್ಯ ಎಂಥರನ್ನೂ ಮಮ್ಮಲ ಮರಗುವಂತೆ ಮಾಡಿದೆ.