ಕರ್ನಾಟಕದ ನಾಲ್ವರು ಆಟಗಾರರ ಖರೀದಿಗೆ ಆಸಕ್ತಿ ತೋರಿದ RCB
ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಕನ್ನಡಿಗರ ಮನ ಗೆಲ್ಲಲು ಆರ್‍ಸಿಬಿ ಮುಂದಾಗಿದೆ. 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಮನೀಶ್ ಪಾಂಡೆ, ಜಗದೀಶನ್ ಸುಚಿತ್, ವಿಜಯ್ ಕುಮಾರ್ ವೈಶಾಕ್, ಶ್ರೇಯಸ್ ಗೋಪಾಲ್ ಮೇಲೆ ಆರ್‍ಸಿಬಿ ಕಣ್ಣಿಟ್ಟಿದೆ. ಮನೀಶ್ ಪಾಂಡೆ ಬ್ಯಾಟಿಂಗ್ ಜತೆ ಉತ್ತಮ ಫೀಲ್ಡರ್ ಕೂಡ ಹೌದು. ಚುಚಿತ್ ಅದ್ಭುತ ಆಲ್‍ರೌಂಡರ್, ವೈಶಾಕ್ ಉತ್ತಮ ಬೌಲಿಂಗ್ ಮಾಡಬಲ್ಲರು. ಶ್ರೇಯಸ್ ಕೂಡ ದೇಶಿಯ ಟೂರ್ನಿಗಳಲ್ಲಿ ಅದ್ಭುತ ಆಲ್‍ರೌಂಡರ್ ಪ್ರದರ್ಶನ ನೀಡಿದ್ದಾರೆ.