ಬೆಂಗಳೂರಿಗೆ ಬಂದ ಕಂಪನಿ: ನಮ್ಮ ಮೆಟ್ರೋ ಸಾರಿಗೆ ಕಾಮಗಾರಿಗಳಲ್ಲಿ ಪಾಲುದಾರಿಕೆ ಈ ಬಗ್ಗೆ ತಿಳಿಯಿರಿ

ಬೆಂಗಳೂರಿಗೆ ಬಂದ  ಕಂಪನಿ: ನಮ್ಮ ಮೆಟ್ರೋ  ಸಾರಿಗೆ ಕಾಮಗಾರಿಗಳಲ್ಲಿ ಪಾಲುದಾರಿಕೆ ಈ ಬಗ್ಗೆ ತಿಳಿಯಿರಿ

ಬೆಂಗಳೂರು, ಫೆಬ್ರವರಿ 9: UAE ಮೂಲದ ಉತ್ಪಾದನಾ ಕಂಪನಿಯಾದ  ತನ್ನ ಮೊದಲ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವೆ 2022 ರಲ್ಲಿ ಸಹಿ ಮಾಡಿದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ (ಸಿಇಪಿಎ) ಭಾಗವಾಗಿ ಬೆಂಗಳೂರು ಸೇರಿದಂತೆ ಹಲವಾರು ಸಾರಿಗೆ ಸಂಬಂಧಿತ ಯೋಜನೆಗಳಲ್ಲಿ ಕೆಲಸ ಮಾಡುವ ಬಗ್ಗೆ ಸಂಸ್ಥೆಯು ಗುರುವಾರ ತಿಳಿಸಿದೆ.

Ducab ಕಂಪನಿಯು ಸಿಇಪಿಎ ಅಡಿಯಲ್ಲಿ ಕಡಿಮೆ ತೆರಿಗೆಗಳ ಅವಕಾಶವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಸುಂಕಗಳು ಐದು ವರ್ಷಗಳಲ್ಲಿ ಶೂನ್ಯಕ್ಕೆ ಬರುತ್ತವೆ. ಪ್ರತಿ ವರ್ಷ 20 ಪ್ರತಿಶತವನ್ನು ಕಡಿಮೆ ಮಾಡುತ್ತವೆ. 'ಒಪ್ಪಂದವು ಎರಡು ದೇಶಗಳ ನಡುವಿನ ತೈಲೇತರ ವ್ಯಾಪಾರವನ್ನು ಐದು ವರ್ಷಗಳಲ್ಲಿ $ 60 ಬಿಲಿಯನ್‌ನಿಂದ $ 100 ಬಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ. ಇದು ಹೂಡಿಕೆಯ ಹೆಚ್ಚುವರಿ ಮಾರ್ಗಗಳನ್ನು ತೆರೆಯುತ್ತದೆ' ಎಂದು  ಕಂಪನಿಯ ಪ್ರಕಟಣೆ ತಿಳಿಸಿದೆ

ಬೆಂಗಳೂರಿನಲ್ಲಿ ಮಾತನಾಡಿದ Ducab ಗ್ರೂಪ್ ಸಿಇಒ ಮೊಹಮ್ಮದ್ ಅಲ್ಮುತಾವಾ, 'ಸಂಸ್ಥೆಯು BMRCL (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಿದೆ. ಇದರಲ್ಲಿ ನಾವು ವಿದ್ಯುತ್‌ ಬಳಸುವಿಕೆ, ವಿದ್ಯುತ್‌ನ ಕಾರ್ಯಕ್ಷಮತೆ ಮತ್ತು ಹೆಚ್ಚುವರಿ ಹೈ ವೋಲ್ಟೇಜ್ ಕೇಬಲ್‌ಗಳನ್ನು ತರಲು ಬಯಸುತ್ತೇವೆ. ಸುಸ್ಥಿರ ಇಂಧನ ಪರಿಹಾರಗಳನ್ನು ಒದಗಿಸಲು ಕಾರ್ಯಗತರಾಗುತ್ತೇವೆ. ಭಾರತೀಯ ಮಾರುಕಟ್ಟೆಯೊಂದಿಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಭಾರತದಲ್ಲಿ ಚಲನಶೀಲತೆ ಮತ್ತು ಸಾರಿಗೆ ಜಾಗದಲ್ಲಿ ವಿವಿಧ ಡೆವಲಪರ್‌ಗಳು ಮತ್ತು ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ' ಎಂದು ಹೇಳಿದೆ.

India ಕಾರ್ಯಾಚರಣೆಯ ಮುಖ್ಯಸ್ಥರಾಗಿರುವ Ducab ವಕ್ತಾರರು, 'ತಡೆರಹಿತ ವಿದ್ಯುತ್ ಪೂರೈಕೆಗಾಗಿ ನಮ್ಮ ಮೆಟ್ರೋಗೆ ಸಬ್‌ಸ್ಟೇಷನ್‌ಗಳನ್ನು ಒದಗಿಸಲು ಸಂಸ್ಥೆಯು ನೋಡುತ್ತಿದೆ' ಎಂದು ಹೇಳಿದರು. ಪ್ರಸ್ತುತ ಬೆಂಗಳೂರು ಮೆಟ್ರೋಗೆ ಸಬ್‌ಸ್ಟೇಷನ್‌ನಿಂದ 132KV-33KV ವಿದ್ಯುತ್ ಪೂರೈಕೆಯ ಅಗತ್ಯವಿದೆ ಮತ್ತು ಅದನ್ನು ನಿರ್ಮಿಸಲು ನಾವು ಗುತ್ತಿಗೆದಾರರಿಗೆ ಪ್ರಸ್ತಾಪಿಸಿದ್ದೇವೆ. ಹೆಚ್ಚುವರಿಯಾಗಿ, ನಾವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪನಗರ ರೈಲ್ವೆ ಯೋಜನೆಗಳು ಮತ್ತು ಟರ್ಮಿನಲ್ 2 ಕಾರ್ಯಾಚರಣೆಗಳಿಗೆ ಸುಸ್ಥಿರ ಇಂಧನ ಪರಿಹಾರಗಳನ್ನು ನೀಡಲು ಬಯಸುತ್ತೇವೆ ಎಂದು ಅಧಿಕಾರಿ ಹೇಳಿದರು.

Ducab ಸಂಸ್ಥೆಯು ಬೆಂಗಳೂರಿನ ಟ್ಯಾಲೆಂಟ್ ಪೂಲ್ ಅನ್ನು ಬಳಸಿಕೊಳ್ಳಿತ್ತದೆ. ಮತ್ತು ಅದರ ಸಾಗರೋತ್ತರ ಯೋಜನೆಗಳಿಗೆ ನಗರದಿಂದ ಟೆಕ್ಕಿಗಳನ್ನು ನೇಮಿಸಿಕೊಳ್ಳುತ್ತದೆ. ದೇಶದಲ್ಲಿ ಸಂಸ್ಥೆಯ ಇತರ ಚಲನಶೀಲತೆ ಮತ್ತು ಸಾರಿಗೆ ಯೋಜನೆಗಳು ದೆಹಲಿ, ಮುಂಬೈ, ಕಾನ್ಪುರ, ಲಕ್ನೋ ಮತ್ತು ಆಗ್ರಾ ಇತರ ಸ್ಥಳಗಳಲ್ಲಿವೆ. ಸಂಸ್ಥೆಯು ಇದುವರೆಗೆ ಭಾರತದಲ್ಲಿ 2,000 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟು ನಡೆಸಿದೆ.