'ಬಿ' ಖಾತಾ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ : ರಾಜ್ಯ ಸರ್ಕಾರದಿಂದ `ಎ' ಖಾತೆ ಭಾಗ್ಯ !
ಬೆಂಗಳೂರು : ರಾಜ್ಯದ ಬಿ ಖಾತಾ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಇರುವ ಬಿ ಖಾತಾ ಸ್ವತ್ತುಗಳನ್ನು ಎ ಖಾತೆಗೆ ಪರಿವರ್ತನೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರಿನ ಸುಮಾರು 6 ಲಕ್ಷ 'ಬಿ' ಖಾತಾ ಆಸ್ತಿಗಳನ್ನು 'ಎ' ಖಾತಾ ಆಗಿ ಬದಲಾವಣೆಗೆ ರಾಜ್ಯ ಸರ್ಕಾರವು ಮೊದಲ ಹೆಜ್ಜೆ ಇಟ್ಟಿದೆ, 2,400 ಚದರ ಅಡಿ ಒಳಗಿನ ಖಾಲಿ ನಿವೇಶನಗಳಿಗೆ 'ಎ' ಖಾತಾ ನೀಡು ವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ರಾಜ್ಯ ಸರ್ಕಾರವು ಕಳೆದ ಬಾರಿ ಬಿಬಿಎಂಪಿ ವ್ಯಾಪ್ತಿಯ 'ಬಿ ಖಾತಾ ಆಸ್ತಿಗಳನ್ನು 'ಎ' ಖಾತಾ ಆಗಿ ಬದಲಾವಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಆಸ್ತಿಗಳನ್ನು ಎ ಖಾತಾಗೆ ಬದಲಾವಣೆಗೆ ಸಂಬಂಧಿಸಿದಂತೆ ತಯಾರಿ ಆರಂಭಿಸಿದೆ.ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಳೆದ ಜೂನ್ -ಜುಲೈನಲ್ಲಿ ನಡೆದ ಈ ಕುರಿತ ಮೊದಲ ಸಭೆಯಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಬದಲಾವಣೆಗೆ ಇರುವ ತೊಡಕುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯು ವಂತೆ ಸೂಚಿಸಿದ್ದರು.
ಇದೀಗ ಬಿಬಿಎಂಪಿಯ ಅಧಿಕಾರಿಗಳೊಂದಿಗೆ ಸಭೆ ನಡೆದ ಸಿಎಂ ಬೊಮ್ಮಾಯಿ 2,400 ಚದರ ಅಡಿ ಒಳಗಿನ ಬಿಖಾತಾನಿವೇಶನಗಳನ್ನು ಪವರ್ತನೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೂಡಲೇ ಈ ಕಾರ್ಯ ಮುಗಿಸುವಂತೆ ಸೂಚಿಸಿದ್ದಾರೆ. ಬಿ ಖಾತಾ ಸ್ವತ್ತುಗಳನ್ನು ಎ ಖಾತೆಗೆ ಪರಿವರ್ತನೆ ಮಾಡಿ ತೆರಿಗೆ ನಿಗದಿಯಾದರೆ ಸ್ಥಳೀಯ ನಗರ ಸಂಸ್ಥೆಗಳಿಗೆ ಕನಿಷ್ಟ 100 ರಿಂದ 150 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎನ್ನಲಾಗಿದೆ.