ಹುಬ್ಬಳ್ಳಿಯಲ್ಲಿ `ರಾಷ್ಟ್ರೀಯ ಯುವಜನೋತ್ಸವ' : ಇಂದು ಕೃಷಿ ಇಲಾಖೆಯಿಂದ `ಸಿರಿಧಾನ್ಯ ನಡಿಗೆ' ಕಾರ್ಯಕ್ರಮ
ಧಾರವಾಡ : 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಜನವರಿ 13 ರ ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಉತ್ಸವ-2023 ನಿಮಿತ್ಯ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಿರಿಧಾನ್ಯ ನಡಿಗೆಯು ಬೆಳಿಗ್ಗೆ 6-30 ಕ್ಕೆ ಕಲಾಭವನದಿಂದ ಆರಂಭಗೊಂಡು ಕೆ.ಸಿ.ಡಿ.
ಇಂದು ಬೆಳಿಗ್ಗೆ 6 ರಿಂದ 8 ರ ವರೆಗೆ ಕವಿವಿ, ಕೃವಿವಿ ಹಾಗೂ ಗುರುತಿಸಿದ ವಿವಿಧ ಸ್ಥಳಗಳಲ್ಲಿ ಯೋಗ ಮತ್ತು ಧ್ಯಾನ ಶಿಬಿರ ಇರಲಿದೆ. ಬಳಿಕ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಅವರು ಧಾರವಾಡ ಕರ್ನಾಟಕ ಕಾಲೇಜು ಫುಟ್ಬಾಲ್ ಕ್ರೀಡಾಂಗಣದಲ್ಲಿ ಯುವ ಕೃತಿ ಉದ್ಘಾಟಿಸಲಿದ್ದಾರೆ. ಬಳಿಕ ಇದೇ ಕ್ರೀಡಾಂಗಣದಲ್ಲಿ 45 ಮಳಿಗೆಗಳನ್ನೊಳಗೊಂಡ ಆಹಾರೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಮಕ್ಷಮದಲ್ಲಿ ಮುಖ್ಯಮಂತ್ರಿಯವರು ಮತ್ತು ಕೇಂದ್ರ ಸಚಿವರು ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಉಪಸ್ಥಿತರಿರಲಿದ್ದಾರೆ.
ಸಿರಿಧಾನ್ಯಗಳ ಮಳಿಗೆಗಳನ್ನು ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಮತ್ತು ಶಾಸಕರಾದ ಅಮೃತ್ ದೇಸಾಯಿ ಉದ್ಘಾಟಿಸಲಿದ್ದಾರೆ. 10 ರಿಂದ 1 ಗಂಟೆವರೆಗೆ ಸೃಜನಾ ರಂಗಮಂದಿರದಲ್ಲಿ ಜಾನಪದ ನೃತ್ಯ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ಅರವಿಂದ ಬೆಲ್ಲದ ಅವರು ಚಾಲನೆ ಕೊಡಲಿದ್ದಾರೆ. ಸುವರ್ಣ ಮಹೋತ್ಸವ ಭವನದಲ್ಲಿ ಜಾನಪದ ಗೀತೆ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10 ರಿಂದ 11 ಗಂಟೆ ಸಮಯದಲ್ಲಿ ಕರ್ನಾಟಕ ವಿವಿಯ ಹಸಿರು ಉದ್ಯಾನದಲ್ಲಿ ಸಕ್ಕರೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು, ಯುವ ಕಲಾವಿದರ ಶಿಬಿರವನ್ನು ಶುಭಾರಂಭ ಮಾಡಲಿದ್ದಾರೆ.
ಕೃಷಿ ವಿವಿಯಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿರುವ ಯುವ ಶೃಂಗ ಸಭೆಯನ್ನು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಉದ್ಘಾಟಿಸಲಿದ್ದು, 'ನವೋದ್ಯಮದ ಬಗ್ಗೆ ಭಾರತೀಯ ನೀತಿ' ಕುರಿತ ಗೋಷ್ಟಿ ಏರ್ಪಡಿಸಲಾಗಿದೆ. ಕರ್ನಾಟಕ ನವೋದ್ಯಮಗಳ ರಾಜಧಾನಿಯಾಗಿದ್ದು, ನವೋದ್ಯಮಗಳಲ್ಲಿರುವ ಅವಕಾಶಗಳು, ಯುವ ಸಮೂಹಕ್ಕೆ ಇದರಿಂದಾಗುವ ಲಾಭಗಳ ಕುರಿತು ಗೋಷ್ಠಿಯಲ್ಲಿ ವಿಷಯ ತಜ್ಞರು ಬೆಳಕು ಚೆಲ್ಲಲಿದ್ದಾರೆ.