ವಾಲ್ಮೀಕಿ ಜಾತ್ರೆಗೆ 'ಕಿಚ್ಚ ಸುದೀಪ್' ಆಗಮನ ವಿಳಂಬ : ರೊಚ್ಚಿಗೆದ್ದು ದಾಂಧಲೆ ನಡೆಸಿದ 'ಫ್ಯಾನ್ಸ್'

ದಾವಣಗೆರೆ : ಜಿಲ್ಲೆಯ ರಾಜನಹಳ್ಳಿಯಲ್ಲಿನ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಆಗಮನ ವಿಳಂಬವಾಗಿದ್ದಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ.
ಸುದೀಪ್ ಬರುವುದು ತಡವಾಗಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು ನೂರಾರು ಕುರ್ಚಿ ಮುರಿದು ದಾಂಧಲೆ ನಡೆಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುತ್ತಿರುವ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಆಗಮಿಸಲಿದ್ದಾರೆ. ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ.
ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಿಂದ ರೂಪಿಸಿರುವ ವಾಲ್ಮೀಕಿ ಜಾತ್ರೆಯ ಐದನೇ ವರ್ಷದ ಉತ್ಸವಕ್ಕೆ ನಿನ್ನೆ ಅದ್ಧೂರಿ ಚಾಲನೆ ಸಿಕ್ಕಿದೆ. ಜಾತ್ರೆಯ ಭದ್ರತೆಗೆ ಡಿವೈಎಸ್ಪಿ 4, ಸಿಪಿಐ 12, ಪಿಎಸ್‌ಐ 36, ಎಎಸ್‌ಐ 46, ಪೇದೆಗಳು 363, ಗೃಹ ರಕ್ಷಕ ಸಿಬ್ಬಂದಿ 200 ಮಂದಿ ಭದ್ರತೆಗೆ ನಿಯೋಜಿಸಲಾಗಿದೆ. ವೇದಿಕೆ,ಸಭಾಂಗಣದಲ್ಲಿ 30,000 ಆಸನಗಳ ವ್ಯವಸ್ಥೆ, ಭದ್ರತೆ ದೃಷ್ಟಿಯಿಂದ 40ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ.