ಭತ್ತ ಖರೀದಿ ಕೇಂದ್ರ ಆರಂಭ |Shiggavi|

ಪಟ್ಟಣ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ಮಳಿಗೆ ಪೂಜೆ ಮಾಡುವ ಮೂಲಕ ಆರಂಭಿಸಿದ ತಹಶಿಲ್ದಾರ ಮಂಜುನಾಥ ಮುನ್ನೋಳ್ಳಿ ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ. ಸಂಗಪ್ಪ ಕೊಡಲ, ಸದಸ್ಯ ವೀರಣ್ಣ ಬಡ್ಡಿ, ಅಧಿಕಾರಿಗಳಾದ ಎಸ್.ಬಿ.ಸಜ್ಜನ, ನಾಗರಾಜ ಲಮಾಣಿ, ಇಂದ್ರ. ಎಮ್, ಸಹಾಯ ಕೃಷಿ ಅಧಿಕಾರಿ ಸುರೇಶ ಬಾಬು ದೀಕ್ಷಿತ, ಎಂಪಿಎಂಸಿ ಕಾರ್ಯದರ್ಶಿ ಬಿ.ಎಸ್.ಗೌಡರ, ಎಪಿಎಂಸಿ ಅಧಿಕ್ಷೀಕರು ಸಿದ್ದು ಮಾಮನಿ, ಮಲ್ಲಿಕಾರ್ಜುನ ರಿತ್ತಿ, ರೈತರಾದ ಬಸವರಾಜ ಗೋಡಿ, ಶಿವಪ್ಪ ಹಾವಣ್ಣನವರ, ಶಿವರಾಜ ಹಾಳಿ ಹಲವರು ಉಪಸ್ಥಿತರಿದ್ದರು.