ರಸ್ತೆ ಬದಿಯಲ್ಲಿ ಸಂಶಯಾಸ್ಪದವಾಗಿ ಮಹಿಳೆ ಸಾವು

ರಸ್ತೆ ಬದಿಯಲ್ಲಿ ಸಂಶಯಾಸ್ಪದವಾಗಿ ಮಹಿಳೆ ಸಾವು

ದಾಂಡೇಲಿ: ನಗರದ ಬೈಲುಪಾರು-ಜನತಾ ಕಾಲೋನಿಯ ಹತ್ತಿರ ರಸ್ತೆ ಬದಿಯಲ್ಲಿ ಸಂಶಯಾಸ್ಪದವಾಗಿ ಮಹಿಳೆಯೊರ್ವಳು ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ವರದಿಯಾಗಿದೆ.

ದಾಂಡೇಲಿಯ ಆಜಾದ್ ನಗರದ ನಿವಾಸಿ ಲಕ್ಷ್ಮೀ ತುಕರಾಮ ರೇಡೆಕರ (27) ಎಂಬ ವಿವಾಹಿತ ಮಹಿಳೆಯೆ ಸಾವನ್ನಪ್ಪಿದ ನತದೃಷ್ಟೆಯಾಗಿದ್ದಾಳೆ.

ಬಡತನ ಕುಟುಂಬದವಳಾದ ಮೃತಳು ಅಲ್ಲಿ ಇಲ್ಲಿ ಎಂದು ಹೋಂ ಸ್ಟೇ, ಹೋಟೆಲ್, ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ನಿನ್ನೆ ಸಂಜೆ 4 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಪತಿಯಿಂದ ದೂರವಾಗಿ ಎಳೆಯ ಮೂರ್ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ ಆಜಾದನಗರದ ತಾಯಿ ಮನೆಯಲ್ಲಿ ವಾಸ್ತವ್ಯದಲ್ಲಿದ್ದಳು.

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸೈಯಗಳಾದ ಐ.ಆರ್.ಗಡ್ಡೇಕರ ಹಾಗೂ ಯಲ್ಲಾಲಿಂಗ ಕುನ್ನೂರು ಅವರುಗಳು ಪೊಲೀಸ್ ತಂಡದ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಗಣೇಶ್.ಕೆ.ಎಲ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರಭು ಗಂಗನಹಳ್ಳಿಯವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮವನ್ನು ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಂತ್ರಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನ ಅಪಘಾತದಿಂದ ಸಾವನ್ನಪಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದ್ದು, ಮೃತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಅಪಘಾತದಿಂದ ಮೃತಪಟ್ಟಲ್ಲಿ ಅಪಘಾತ ನಡೆಸಿದ ವಾಹನ ಯಾವುದು? ಅಪಘಾತ ನಡೆಸಿದ ನಂತರ ವಾಹನ ಪರಾರಿಯಾಗಿದ್ದು ಯಾಕೆ? ಇನ್ನೂ ರಾತ್ರಿ ವೇಳೆ ಇಲ್ಲವೇ ಬೆಳಗ್ಗಿನ ಜಾವದಲ್ಲಿ ಅಪಘಾತ ನಡೆದಿದ್ದರೂ, ಮೃತ ಲಕ್ಷ್ಮೀ ಈ ರಸ್ತೆಯಲ್ಲಿ ಯಾಕೆ ಹೋದರೂ, ಎಲ್ಲಿಗೆ ಹೋಗಿದ್ದರು? ಎನ್ನುವ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದ ಸ್ಪಷ್ಟ ಉತ್ತರ ಸಿಗಲಿದೆ.

ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಎಳೆಯ ಮೂರ್ನಾಲ್ಕು ವರ್ಷದ ಮಗುವಿನ ತಾಯಿಯಾಗಿರುವ ಮೃತ ಲಕ್ಷ್ಮೀ ತುಕರಾಮ ರೇಡೆಕರ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೂಲಿ ಮಾಡಿ ಬದುಕು ನಡೆಸುವ ಲಕ್ಷ್ಮೀಯವರ ತಾಯಿ ಸುಮನ ತುಕರಾಮ ರೇಡೆಕರ ಅವರ ಮೊಮ್ಮಗಳನ್ನು ನೋಡಿ, ಈ ಮಗುವಿನ ಮುಂದಿನ ಸ್ಥಿತಿ ಏನು ಎಂದು ಗೋಗೆರೆಯುತ್ತಿದ್ದಾರೆ.