ಬೀದರ್ ಜಿಲ್ಲೆಯಲ್ಲಿ ಧೂಳಿಪಟ್ಟ ಆಗುತ್ತೆ ಬಿಜೆಪಿ ಈಶ್ವರ ಖಂಡ್ರೆ | Bidar |

ಬೀದರ್ ಜಿಲ್ಲೆಯಲ್ಲಿ ಎಲ್ಲಾಕಡೆ ಸುತ್ತಾಡಿದ್ದೇನೆ ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮರಾವ್ ಪಾಟೀಲರ ಗೆಲುವು ಖಚಿತ. ಜಿಲ್ಲೆಯಲ್ಲಿ ಬಿಜೆಪಿ ಧೂಳಿಪಟ್ಟ ಆಗುತ್ತೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಚುನಾವಣೆಪ್ರಚಾರದ ಸಂಬಂಧಿಸಿದಂತೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿಗೆ ಭೆಟಿ ನೀಡಿದ್ದ ಅವರು, ಸ್ಥಳೀಯ ಬಿಜೆಪಿ ನಾಯಕರ ಅಧಿಕಾರದ ದರ್ಪ, ದುರ್ನಡತೆ, ಅಕ್ರಮ ಮತ್ತು ಸ್ವಜನ ಪಕ್ಷಪಾತದಿಂದ ಜಿಲ್ಲೆಯ ಜನತೆ ಬೇಸತ್ತಿದ್ದಾರೆ. ಬಹಿರಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಮರ್ಥನೆ ಕೊಡುತ್ತವೆ ಎಂದು ಹೇಳುವ ಮುಖಾಂತರ ಔರಾದಿನಲ್ಲಿ ಎಲ್ಲಾಕ್ಕಿಂತ ಹೆಚ್ಚು ಬೆಂಬಲ ಸಿಗುತ್ತೆ ಎಂಬ ವಿಶ್ವಾಸವಿದೆ ಎಂದು ನುಡಿದರು.